ಅಕ್ಟೋಬರ್ 26 ರಿಂದ ಅಖಿಲ ಭಾರತ ಕೊಂಕಣಿ ಪರಿಷದ್‌ನ 33ನೇ ಅಧಿವೇಶನ

Update: 2024-10-07 09:03 GMT

ಮಂಗಳೂರು: ಅಖಿಲ ಭಾರತ ಕೊಂಕಣಿ ಪರಿಷದ್‌ನ 33ನೇ ಅಧಿವೇಶನ ಗೋವಾದ ಮಡ್ಗಾಂವ್, ರವೀಂದ್ರಭವನದಲ್ಲಿ ಅಕ್ಟೋಬರ್ 26 ಮತ್ತು 27 ರಂದು ನಡೆಯಲಿದೆ. ಈ ಎರಡು ದಿನಗಳ ಕಾರ್ಯಕ್ರಮವನ್ನು ಅಕ್ಟೋಬರ್ 26ರ ಬೆಳಗ್ಗೆ ಹಿರಿಯ ಬರಹಗಾರ ಮತ್ತು ಭಾಷಾ ವಿದ್ವಾಂಸರಾದ ಡಾ. ಗಣೇಶ ದೇವಿ ಉದ್ಘಾಟಿಸಲಿದ್ದಾರೆ

ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪರಿಷದ್‌  ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ಮಾಹಿತಿ ನೀಡಿದರು.

ಪರಿಷದ್‌ನಲ್ಲಿ ಕೊಂಕಣಿ ಶಿಕ್ಷಣ, ಭಾಷೆಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಬಳಕೆ ಇತ್ಯಾದಿಗಳನ್ನು ಒಳಗೊಂಡ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪರಿಷ‌ದ್ ಗೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಿಂದ ಪ್ರತಿನಿಧಿಗಳು ಹಾಜರಾಗಲಿದ್ದಾರೆ. ರೆ. ಮೌಝಿನೋ ಅರ್ತಾಡೆ ಪರಿಷ‌ದ್ ನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದು, ಎರಡು ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿರುತ್ತಾರೆ. ಕೊಂಕಣಿ ಭಾಷಾ ಮಂಡಲದ ಮಾಜಿ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ ಮತ್ತು ಅನಂತ ಅಗ್ನಿ, ಮಂಗಲ್‌ದಾಸ್ ಭಟ್ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಕೊಂಕಣಿ ಪರಿಷದ್ ಸ್ವಾಗತ ಸಮಿತಿ ಅಧ್ಯಕ್ಷ  ಪ್ರಶಾಂತ್ ನಾಯಕ್, ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ, ಡಾ. ಕಸ್ತೂರಿ ಮೋಹನ್ ಪೈ , ಎಚ್. ಎಮ್. ಪೆರ‍್ನಾಲ್ , ಟೈಟಸ್ ನೊರೊನ್ಹಾ , ಮೆಲ್ವಿನ್ ರೊಡ್ರಿಗಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News