ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತದಲ್ಲಿ ಕಳೆದ ಆರು ತಿಂಗಳಲ್ಲಿ 88 ಮಂದಿ ಮೃತ್ಯು

Update: 2023-07-02 05:46 GMT

ಮುಂಬೈ: ಮಹಾರಾಷ್ಟ್ರದ ಸಮೃದ್ಧಿಎಕ್ಸ್ ಪ್ರೆಸ್ ವೇಯಲ್ಲಿ( Expressway)ಯಲ್ಲಿ ಕಳೆದ ಆರು ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 88 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮೃದ್ಧಿ ಎಕ್ಸ್ ಪ್ರೆಸ್ ವೇಯಲ್ಲಿ ಶನಿವಾರದಂದು ಖಾಸಗಿ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 25 ಮಂದಿ ಸಾವನ್ನಪ್ಪಿದ್ದರು. ಈ 25 ಮಂದಿ ಸೇರಿದಂತೆ ಈ ತನಕ 88 ಮಂದಿ ಈ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಆರು ಲೇನ್ ಅಗಲದ ಪ್ರವೇಶ ನಿಯಂತ್ರಿತ  ಅಪಘಾತಗಳಿಗೆ ರಸ್ತೆ ಸಂಮೋಹನವು (ರೋಡ್ ಹಿಪ್ನಾಸಿಸ್) ಒಂದು ಕಾರಣ ಎಂದು ರಾಜ್ಯ ಹೆದ್ದಾರಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಿಂದ ನಾಗ್ಪುರ-ಮುಂಬೈ ಎಕ್ಸ್ ಪ್ರೆಸ್ ವೇ ಭಾಗಶಃ ತೆರೆದಿದ್ದರಿಂದ ಒಟ್ಟು 39 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಈ ಎಕ್ಸ್ ಪ್ರೆಸ್ ವೇಯಲ್ಲಿ 616 ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿವೆ, ಇದರಲ್ಲಿ 656 ಜನರು ಗಂಭೀರ ಹಾಗೂ ಸಣ್ಣ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು.

ಹೆಚ್ಚಿನ ಅಪಘಾತಗಳು ಅತಿಯಾದ ವೇಗ, ಚಾಲಕರು ನಿದ್ದೆಗೆ ಜಾರುವುದು ಹಾಗೂ ಟೈರ್ ಸ್ಫೋಟದಂತಹ ಕಾರಣಗಳಿಂದ ಉಂಟಾಗಿದೆ.

2022 ರಲ್ಲಿ ಮಹಾರಾಷ್ಟ್ರದಾದ್ಯಂತ 15,224 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News