ಮೇ 3: ಮುನಿಯಾಲ್ ನಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ

Update: 2025-03-18 18:13 IST
ಮೇ 3: ಮುನಿಯಾಲ್ ನಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ
  • whatsapp icon

ಕಾರ್ಕಳ :ಶ್ರೀಅರ್ಧನಾದೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ) ಮುಟ್ಟ್ಲುಪಾಡಿ ಆಶ್ರಯದಲ್ಲಿ ಕಬಡ್ಡಿ ಆಟಗಾರ ದಿ ಪ್ರೀತಂ ಶೆಟ್ಟಿ ಸ್ಮರಣಾರ್ಥ ಕಾರ್ಕಳ ವಿಧಾನ ಸಬಾ ವ್ಯಾಪ್ತಿ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟವು ಮುನಿಯಾಲಿನ ವೀರ ಸಾವರ್ಕರ್ ಮೈದಾನದಲ್ಲಿ ಮೇ 3 ರಂದು ಸಡೆಯಲಿರುವುದು ಎಂದು ಉದ್ಯಮಿ , ಸಮಾಜ ಸೇವಕ ಗಿರೀಶ್ ಶೆಟ್ಟಿ ಕುಡುಪುಲಾಜೆ ತಿಳಿಸಿದರು

ಅವರು ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಆಟಗಾರನ್ನೊಳಗೊಂಡ 8 ವಿವಿಧ ಮಾಲಕರನ್ನೊಳಗೊಂಡ 8 ತಂಡಗಳು ಭಾಗವಹಿಸಲಿದೆ. ಪ್ರೊಕಬಡ್ಡಿ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 11 ಸಾವಿರಕ್ಕೂ ಅಧಿಕ ಜನರಿಗೆ ಪಂದ್ಯ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ‌ ಮಾಡಲಾಗಿದೆ. ಪಂದ್ಯಾಟದ ವಿಶೇಷ ಆಕರ್ಷಣೆಯಾಗಿ ಮಾಜಿ ಕ್ರಿಕೆಟಿಗರು, ಮಾಜಿ ಪ್ರೊಕಬಡ್ಡಿ ಆಟಗಾರರು, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಟ,ನಟಿಯರು ,ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಗೋಪಿನಾಥ್ ಭಟ್, ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News