ಸೆ. 6ರಿಂದ ಮಂಗಳೂರಿನಲ್ಲಿ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್

Update: 2024-07-26 14:14 GMT

ಮಂಗಳೂರು: ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಸೆಪ್ಟೆಂಬರ್ 6 ರಿಂದ 8 ರವರೆಗೆ ಆಯೋಜಿಸಲಾಗಿದೆ. ಕರಾಟೆ ಸ್ಪರ್ಧೆಯ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕರಾಟೆ ಕ್ರೀಡಾಕೂಟದ ಸಂಘಟಕ ಡಾ. ರಾಹುಲ್ ಟಿ. ಜಿ ಸಭೆಯಲ್ಲಿ ಮಾತನಾಡಿ ‘‘ಶೌರ್ಯ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ -2024’’ ಪಂದ್ಯಾಟದಲ್ಲಿ ವಿವಿಧ ದೇಶಗಳ ಹಲವು ಖ್ಯಾತ ಕರಾಟೆ ಪಟುಗಳು ಭಾಗವಹಿಸಲಿದ್ದಾರೆ. ಮಂಗಳೂರಿನ ಕೋರ್ಡಲ್ ಚರ್ಚ್ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ. ಸುಮಾರು 2000 ಕ್ಕೂ ಅಧಿಕ ಮಂದಿ ವಿವಿಧ ದೇಶಗಳಿಂದ ಈ ಪಂದ್ಯಾಟಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

ವಿಶ್ವ ಕರಾಟೆ ಒಕ್ಕೂಟದ ನಿಯಮಾವಳಿಗಳಂತೆ ಕರಾಟ ಸ್ಪರ್ಧೆ ನಡೆಯಲಿದೆ ಅಂತರಾಷ್ಟ್ರೀಯ ರೆಫ್ರಿಗಳು ಸ್ಪರ್ಧೆಯನ್ನು ನಿರ್ವಹಿಸುವರು ಎಂದು ಹೇಳಿದರು.

ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದ ಹಿನ್ನೆಲೆಯಲ್ಲಿ ವಸತಿ, ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ ಎಂದು ಹೇಳಿದರು. 

ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಮಾತನಾಡಿ ಈ ಕ್ರೀಡಾಕೂಟಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕ್ರೀಡಾಕೂಟ ಸಂಘಟಕರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರಾಟೆ ಚಾಂಪಿಯನ್‌ಶಿಪ್‌ನ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಯುವಜನ ಸೇನೆ ಮತ್ತು ಕ್ರೀಡಾ ಉಪ ನಿರ್ದೇಶಕ ಪ್ರವೀಣ್ ಡಿಸೋಜ, ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ, ಕರಾಟೆ ಸಂಘಟನೆಗಳ ಪದಾಧಿಕಾರಿಗಳಾದ ಸುರೇಂದ್ರ, ಸೂರಜ್ ಶೆಟ್ಟಿ, ರಾಜ್‌ಗೋಪಾಲ್ ರೈ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News