ಮಂಗಳೂರು: ಈದ್ಗಾ ಮಸ್ಜಿದ್‌ನಲ್ಲಿ ಇಷ್ಕೇ ರಸೂಲ್ ಕಾರ್ಯಕ್ರಮ

Update: 2024-09-16 14:55 GMT

ಮಂಗಳೂರು: ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿ ಬಾವುಟಗುಡ್ಡ ಇದರ ವತಿ ಯಿಂದ ಈದ್ಗಾ ಜುಮಾ ಮಸೀದಿಯಲ್ಲಿ ಇಷ್ಕೇ ರಸೂಲ್ ಮತಪ್ರಭಾಷಣ ಕಾರ್ಯುಕ್ರಮ ಸೋಮವಾರ ನಡೆಯಿತು.

ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಉಸ್ತಾದ್ ದುಆಗೈದು ಕಾರ್ಯ ಕ್ರಮ ಉದ್ಘಾಟಿಸಿದರು. ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಡಾ. ಹಾಜಿ ಯೆನೆಪೋಯ ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ, ಈದ್ಗಾ ಮಸೀದಿಯ ಖತೀಬ್ ಮುಸ್ತಫಾ ಅಝ್ಹರಿ, ನಡುಪಳ್ಳಿ ಮಸೀದಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ಪ್ರಭಾಷಣ ಮಾಡಿದರು.

ವೇದಿಕೆಯಲ್ಲಿ ಝೀನತ್ ಭಕ್ಷ್ ಕೇಂದ್ರ ಮಸೀದಿಯ ಉಪಾಧ್ಯಕ್ಷ ಅಶ್ರಫ್ ಕೆ.ಇ, ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್, ಸಮಿತಿಯ ಸದಸ್ಯರಾದ ಅದ್ದು ಹಾಜಿ, ಅಬ್ದುಲ್ ಸಮದ್ ಹಾಜಿ, ಶಾಹುಲ್ ಹಮೀದ್ ತಂಳ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News