ಸಂಪಾಜೆ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ: ಸೋಮಶೇಖರ ಕೊಯಿಂಗಾಜೆ ನೇತೃತ್ವದ ತಂಡಕ್ಕೆ ಮತ್ತೊಮ್ಮೆ ಅಧಿಕಾರ

Update: 2024-12-23 15:59 GMT

ಸುಳ್ಯ: ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗ ಬಹುಮತ ಗಳಿಸಿದೆ.

12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ರಂಗ 9 ಸ್ಥಾನಗಳಲ್ಲಿ ಜಯ ಗಳಿಸಿತು. ಬಿಜೆಪಿ ಬೆಂಬಲಿತ ಸಮನ್ವಯ ಸಹಕಾರ ಬಳಗ 2 ಸ್ಥಾನಗಳಲ್ಲಿ ಜಯಗಳಿಸಿದೆ. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಜಾನಿ ಕೆ.ಪಿ, ಜಾನಶೀಲನ್(ವಿ.ರಾಜು ನೆಲ್ಲಿಕುಮೇರಿ) ಗೆಲುವು ಸಾಧಿಸಿದರು.

ಬಿಜೆಪಿ ಬೆಂಬಲಿತ ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್.ಪಿ.ಎನ್ ಗೆಲುವು ಸಾಧಿಸಿದರೆ, ಸಾಮಾನ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜಿ.ಕೆ.ಹಮೀದ್ ಗೂನಡ್ಕ ಜಯ ಗಳಿಸಿದರು. ಸಹಕಾರಿ ಅಭಿವೃದ್ಧಿ ರಂಗದ ಸಂಜೀವ ಪೂಜಾರಿ ಮತ್ತು ಜಾನಶೀಲನ್(ವಿ.ರಾಜು ನೆಲ್ಲಿಕುಮೇರಿ) ಅವರಿಗೆ ತಲಾ 264 ಮತಗಳು ಬಂದವು. ಬಳಿಕ ಅದೃಷ್ಠ ಚೀಟಿ ಎತ್ತುವ ಮೂಲಕ ಜ್ಞಾನಶೀಲನ್ ವಿಜೇತರಾದರು.

ಸಮನ್ವಯ ಸಹಕಾರಿ ಬಳಗದ ಎಸ್.ಪಿ.ಲೋಕನಾಥ್ ಹಾಗೂ ಶ್ರೀಧರ ಬಿ.ಅವರಿಗೂ ತಲಾ 263 ಮತಗಳು ಬಂದಿತ್ತು. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿ ಅಬೂಸಾಲಿ ಪಿ.ಕೆ ಜಯ ಗಳಿಸಿದರು. ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿ ಜಗದೀಶ ರೈ ಕೆ.ಆರ್ ಜಯ ಗಳಿಸಿದರು. ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಉಷಾ ರಾಮ ನಾಯ್ಕ ಜಯ ಗಳಿಸಿದರು. ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಮನ್ವಯ ಸಹಕಾರಿ ಬಳಗದ ಜಗದೀಶ ಜಿ.ವಿ. ಜಯಗಳಿಸಿ ದರು. ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಯಮುನಾ ಬಿ.ಎಸ್, ಪ್ರಮೀಳಾ ಪೆಲ್ತಡ್ಕ ಜಯಭೇರಿ ಭಾರಿಸಿದರು. ಮಹಿಳಾ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗ್ರಾ.ಪಂ.ಅಧ್ಯಕ್ಷೆ ಸುಮತಿ ಶಕ್ತಿವೇಲು ಪರಾಭವಗೊಂಡರು.

ಕಾಂಗ್ರೆಸ್ ವಿಜಯೋತ್ಸವ ವೇಳೆ ಮಾತಿನ ಚಕಮಕಿ

ಸಂಪಾಜೆ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆಯ ರಲ್ಲಿ ಸೋಮಶೇಖರ ಕೊಯಿಂಗಾಜೆ ನೇತೃತ್ವದ ಸಹಕಾರಿಗಳ ಅಭಿವೃದ್ಧಿ ರಂಗವು 9 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸುತ್ತಿದ್ದ ವೇಳೆ ಸೋಮಶೇಖರ ಕೊಯಿಂಗಾಜೆ ಬಗ್ಗೆ ಬಿಜೆಪಿ ಕಾರ್ಯಕರ್ತರೊಬ್ಬರು ವೈಯಕ್ತಿಕವಾಗಿ ನಿಂಧಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. ಸೋಮಶೇಖರ ಕೊಯಿಂಗಾಜೆ ಅವರು ವಿಜಯೋತ್ಸವದಲ್ಲಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ತನ್ನನ್ನು ವೈಯಕ್ತಿಕವಾಗಿ ನಿಂಧಿಸಿದ್ದಾರೆ ಎಂದು ಹೇಳಿದಾಗ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತ ಧನಪಾಲ ಹಾಗೂ ಸೋಮಶೇಖರ ಕೊಯಿಂಗಾಜೆ ಮಧ್ಯೆ ಮಾತಿನ ಚಕಮಕಿ ಪ್ರಾರಂಭಗೊಂಡಿತು. ಈ ಮಾತಿನ ಚಕಮಕಿ ಸ್ಥಳದಲ್ಲಿದ್ದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಏರ್ಪಟ್ಟಿತು. ಸ್ಥಳದಲ್ಲಿದ್ದ ಪೊಲೀಸರು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News