ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಸಂಸತ್ತಿನಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ
ಕೊಣಾಜೆ: ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ತುಚ್ಛವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ಲೋಕಸಭೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿಯಿಂದ ಹರೇಕಳ ಕಡವಿನಬಳಿಯಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರು, ಬಾಬಾ ಸಾಹೇಬ್ ಅಂಬೇಡ್ಕರವರು ಸಂವಿಧಾನ ರಚನೆ ಮಾಡದೇ ಇದ್ದರೆ ಇಂದು ನೀವು ಸಂಸತ್ತಿನಲ್ಲಿರುತ್ತಿರಲಿಲ್ಲ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೆ ನೀವು ಪಕೋಡ ಮಾರುತ್ತಾ ಇರಬೇಕಿತ್ತು. ಈ ದೇಶದಲ್ಲಿ ಧರ್ಮ,ಜಾತಿ,ಪಂಗಡ,ಭಾಷೆಯ ಭೇದವಿಲ್ಲದೆ ನಾವು ಬದುಕಲು ಮೂಲ ಕಾರಣವೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಫೀಕ್ ಹರೇಕಳ,ಅಶ್ರಫ್ ಹರೇಕಳ,ಇಕ್ಬಾಲ್ ಹರೇಕಳ,ಹೈದರ್ ಹರೇಕಳ,ಬಶೀರ್ ಲಚ್ಚಿಲ್,ರಝಾಕ್ ಮುಡಿಪು,ರಝಾಕ್ ಮೊಂಟೆಪದವು,ಅಬೂಬಕ್ಕರ್ ಜಲ್ಲಿ,ಫಾರೂಕ್ ಕೊಣಾಜೆ,ಸತ್ತಾರ್ ಕೊಜಪಾಡಿ,ಉಮರಬ್ಬ ನ್ಯೂಪಡ್ಪು, ಇಬ್ರಾಹಿಂ ಮದಕ,ಶಾಲಿ ಪಾವೂರು ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ವಂದಿಸಿದರು.