ಕಿನ್ನಿಗೋಳಿ: ನೂರುಲ್‌ ಹುದಾ ಅಸೋಸಿಯೇಶನ್‌ ನೇತೃತ್ವದಲ್ಲಿ ಮೀಲಾದ್‌ ರ‍್ಯಾಲಿ

Update: 2024-09-16 14:58 GMT

ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್‌ (ಸ.ಅ.) ಅವರ ಜೀವನವೇ ಒಂದು ಸಂದೇಶವಾಗಿದೆ. ಇಸ್ಲಾಮಿನ ಆಶಯವನ್ನು ಕಲಿಯಬೇಕಿದ್ದರೆ ಪ್ರವಾದಿ ಜೀವನವನ್ನಷ್ಟೇ ಅರಿತರೆ ಸಾಕು. ಮುಹಮ್ಮದ್‌ ಅವರನ್ನು ಸರ್ವ ಧರ್ಮೀಯರಿಗೂ ಉಪದೇಶ ನೀಡುವವರಾಗಿ ಅಲ್ಲಾಹನು ಕಳುಹಿಸಿಕೊಟ್ಟಿರುವುದಾಗಿ ಕುರ್‌ಆನ್‌ ತಿಳಿಸುತ್ತದೆ ಎಂದು ಮಿಸ್ಬಾಹುಲ್‌ ಮದೀನಾ ಕಲ್ಕರೆ ಪ್ರಾಂಶುಪಾಲ ಅಬ್ದುಲ್‌ ರಶೀದ್‌ ಇಮಾಮಿ ಸಖಾಫಿ ಹೇಳಿದರು.

ಪ್ರವಾದಿ ಮುಹಮ್ಮದ್‌ (ಸ.ಅ.) ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಖಿಲ್‌ರಿಯಾ ಜುಮ್ಮಾ ಮಸೀದಿ ಪ್ರಯುಕ್ತ ಶಾಂತಿನಗರದಿಂದ ಕಿನ್ನಿಗೋಳಿ ಪೇಟೆವರೆಗೆ ನೂರುಲ್‌ ಹುದಾ ಅಸೋಸಿಯೇಶನ್‌ ನೇತೃತ್ವದಲ್ಲಿ ಮೀಲಾದ್‌ ರ‍್ಯಾಲಿ ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಖಿಲ್‌ರಿಯಾ ಜುಮ್ಮಾ ಮಸೀದಿ ಖತೀಬರು ಅಬ್ದುಲ್‌ ಲತೀಫ್‌ ಸಖಾಫಿ ಮಾತನಾಡಿ, 1400 ವರ್ಷಗಳ ಸರಿದು ಹೋದರೂ ಪ್ರವಾದಿ ಮುಹಮ್ಮದ್‌ (ಸ.ಅ.) ಅವರ ತ್ಯಾಗ, ಹೋರಾಟ ಇಂದಿಗೂ ಪ್ರಸಕ್ತವೆನಿಸಿಕೊಂಡಿದೆ. ಸಮಾಜ ದಲ್ಲಿರುವ ಅನಿಷ್ಟಗಳನ್ನು ದೂರ ಮಾಡಬೇಕಿದ್ದರೆ ಪ್ರವಾದಿಯರ್ವರ ಸಂದೇಶ ಪಾಲಿಸುವುದೇ ಅದಕ್ಕಿರುವ ಮಾರ್ಗವಾಗಿದೆ ಎಂದರು.

ಮೀಲಾದ್‌ ರ‍್ಯಾಲಿಯಲ್ಲಿ ಖಿಲ್‌ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಎ.ಬಿ. ಅಬೂಬಕ್ಕರ್‌, ಪ್ರಧಾನ ಕಾರ್ಯದರ್ಶಿ ಇಕ್ಬಾಲ್‌ ಗುತ್ತಕಾಡು, ಉಪಾಧ್ಯಕ್ಷ ಸೈದಾಲಿ, ಕೋಶಾಧಿಕಾರಿ ಆರೀಫ್‌, ಲೆಕ್ಕ ಪರಿಶೋಧಕ ಟಿ.ಎ. ಹನೀಫ್‌, ಸಹ ಉಸ್ತಾದರಾದ ಸುಹೇಲ್‌ ಸಖಾಫಿ, ಅಬ್ದುಲ್‌ ರಝಾಕ್‌ ಹನೀಫಿ, ನೂರುಲ್‌ ಹುದಾ ಅಸೋಸಿಯೇಶನ್‌ ಅಧ್ಯಕ್ಷ ನವಾಝ್‌ ಕಲ್ಕರೆ, ಕಾರ್ಯದರ್ಶಿ ಅನೀಸ್‌ ಗುತ್ತಕಾಡು, ಜೊತೆ ಕಾರ್ಯದರ್ಶಿ ಶಾಕೀರ್‌, ಉಪಾಧ್ಯಕ್ಷ ನೌಫಲ್‌, ಜೆಹೆಚ್‌ ಜಲೀಲ್‌, ಟಿ.ಕೆ. ಅಬ್ದುಲ್‌ ಖಾದರ್‌, ಕಿನ್ನಿಗೋಳಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಟಿಎಚ್‌ ಮಯ್ಯದ್ದಿ, ವಿ. ಅಬೂಬಕ್ಕರ್‌, ಗುಲಾಂ ಹುಸೇನ್‌, ಕಬೀರ್‌, ಖಾದರ್‌, ನೂರುದ್ದೀನ್‌ ಮತ್ತಿತ್ತರರು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ, ಕಿನ್ನಿಗೋಳಿ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದವು ಮೆರವಣಿಗೆ ಯಲ್ಲಿ ಸಾಗಿ ಬಂದವರಿಗೆ ಸಿಹಿ ಹಾಗೂ ತಂಪು ಪಾನೀಯ ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News