ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಭೆ; ಐವನ್ ಡಿಸೋಜಗೆ ಸನ್ಮಾನ
ಮಂಗಳೂರು: ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮಹಿಳಾ ಪಿ.ಯು ಕಾಲೇಜು ಇದರ ಶಿಕ್ಷಕ ರಕ್ಷಕ ಸಮಿತಿ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜಾಗ್ವಾರ್ ಶೊ ರೂಂನ ಸಭಾಂಗಣದಲ್ಲಿ ನಡೆಯಿತು.
ಶಾಲಾ ಆಡಳಿತ ಸಮಿತಿಯ ಚೆರ್ಮೇನ್ ಎಸ್. ಮುಹಮ್ಮದ್ ಹಾಜಿ ಶಿಕ್ಷಕ ರಕ್ಷಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಡಿಡಿಪಿಐ(ಆಡಳಿತ) ವೆಂಕಟೇಶ್ ಸುಬ್ಬಯ್ಯ ಪಟಾಗರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಸಮಾನತೆಯಿಂದ ಅಧಿಕ ಅಂಕ ಗಳಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಮಥಾಯಿ ವಿಷಯ ಮಂಡಿಸಿದರು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸನ್ಮಾನ ಪತ್ರವನ್ನು ಶಾಲಾ ಅಧ್ಯಾಪಕಿ ರಂಜಿತ ಸಿಂಗ್ ವಾಚಿಸಿದರು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಎಸ್‌ಎಸ್‌ಎಲ್‌ಸಿ ಪುರಸ್ಕಾರವನ್ನು ಶಾಲಾ ಅಧ್ಯಾಪಕಿ ಜಯಲತಾ ಮತ್ತು ಪಿಯುಸಿ ಪುರಸ್ಕಾರವನ್ನು ಅಧ್ಯಾಪಕಿ ಲವ್ಯಾ ನೆರವೇರಿಸಿದರು.
ಶಾಲಾ ಸಂಚಾಲಕ ರಿಯಾಝ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಕಾರ್ಯದರ್ಶಿಗಳಾದ ಅಬ್ದುಲ್ ಹಾಜಿ ಸಿತಾರ್ ಸ್ವಾಗತಿಸಿದರು, ಉಪಾಧ್ಯಕ್ಷ ಕೆ.ಬಿ.ಅಬ್ದುಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿ ಎಸ್. ಉಮರಬ್ಬ ,ಶಾಲಾ ಟ್ರಸ್ಟಿಗಳಾದ ಹಮೀದ್.ಕೆ ಉಪಸ್ಥಿತರಿದ್ದರು. ಅರಬಿಕ್ ಅಧ್ಯಾಪಕ ಇಸ್ಮಾಯೀಲ್ ಯಮಾನಿ ಪ್ರಾರ್ಥಿಸಿ, ಇರ್ಫಾನ್ ಅಸ್ಲಮಿ ಕಾರ್ಯಕ್ರಮ ನಿರೂಪಿಸಿದರು.