ಜ.11ರಂದು ಸುರತ್ಕಲ್‌ನಲ್ಲಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ
ಮಂಗಳೂರು, ಜ.7: ವೀರ ಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ.ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ 2025 ಜನವರಿ 11 ಶನಿವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದ ಹತ್ತಿರ ನಡೆಯಲಿದೆ.
ಉದ್ಘಾಟನಾ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಬಿಎಎಸ್ ಎಫ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಶ್ರೀ ಸದಾಶಿವ ಮಹಾಗಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್ ಗಣಪತಿ ಮಯ್ಯ, ಶ್ರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಅರುಣ್ ಪೈ, ಮೋಹನ್ ಪೂಜಾರಿ ಅಗರಮೇಲು, ಸಚ್ಚೀಂದ್ರ ಮೆಂಡನ್ ದೊಡ್ಡಕೊಪ್ಲ, ಕಾರ್ಪೋರೇಟರ್ ಗಳಾದ ಸರಿತಾ ಶಶಿಧರ್, ನಯನ ಕೋಟ್ಯಾನ್, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ, ಉದ್ಯಮಿ ಉಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಬಿಎಎಸ್ ಎಫ್ ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಬೃಜೇಶ್ ಚೌಟ, ಶಾಸಕರಾದ ಡಾ ವೈ ಭರತ್ ಶೆಟ್ಟಿ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೇಯರ್ ಮನೋಜ್ ಕುಮಾರ್, ಎಸಿಪಿ ಶ್ರೀಕಾಂತ ಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸತೀಶ್ ಮುಂಚೂರು, ಅಂಜನಾ ಎಂ ಶೆಟ್ಟಿ, ಯಜ್ಞೇಶ್ವರ ಬರ್ಕೆ, ಶ್ರೀಕರ ಶೆಟ್ಟಿ ಕಾಪು, ವಾಲಿಬಾಲ್ ಅಸೋಸಿಯೇಶನ್ ನ ಅಧ್ಯಕ್ಷ ಸತೀಶ್, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಕಟೀಲು ಶ್ರೀ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ಭಾಗವಹಿಸಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಿವಿಲ್ ಕಂಟ್ರಾಕ್ಟರ್ ಪಾಂಡುರಂಗ ವಿ ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಪುತ್ತೂರು ಪಿಡಬ್ಲ್ಯು ಇಂಜಿನಿಯರ್ ರಾಜೇಶ್ ರೈ ಭಾಗವಹಿಸಲಿದ್ದಾರೆ.
ವೀರ ಕೇಸರಿ ಸಂಸ್ಥೆಯ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ,ಗೌರವಾಧ್ಯಕ್ಷ ಸುಧಾಕರ ಸುರತ್ಕಲ್, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಉಪಸ್ಥಿತರಿರುವರು.
ಪಂದ್ಯಾಟದಲ್ಲಿ ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ಸಿಐಎಸ್ ಎಫ್ ರಾಂಚಿ, ಕೇರಳ ಕಸ್ಟಮ್ಸ್, ಡೇಂಜರ್ಸ್ ಬಾಯ್ಸ್, ಪಂಜ ಫ್ರೆಂಡ್ಸ್ ತಂಡಗಳು ಭಾಗವಹಿಸಲಿದೆ. ವಿಜೇತರಿಗೆ ಪ್ರಥಮ 77,777 ದ್ವಿತೀಯ 55,555 ರೂ. ತೃತೀಯ 22,222 ರೂ. ಚತುರ್ಥ 11,111 ರೂ.ನಗದಿನೊಂದಿಗೆ ವೀರಕೇಸರಿ ಟ್ರೋಫಿ 2025 ನೀಡಲಾಗುವುದು ಎಂದು ವೀರ ಕೇಸರಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.