ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಕಾರ್ಯಾಗಾರ

Update: 2025-01-08 13:23 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು, ಶಾಲಾ ಶಿಕ್ಷಣ ಇಲಾಖೆ ದ.ಕ.ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ವಿಷಯವಾರು ಕಾರ್ಯಾಗಾರ ಉದ್ಘಾಟಣಾ ಸಮಾರಂಭವು ಬುಧವಾರ ಬದ್ರಿಯಾ ಪ್ರೌಢ ಶಾಲೆ ಕಂದಕ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಣೆಯನ್ನು ಜೇಮ್ಸ್ ಕುಟಿನ (ಕ್ಷೇತ್ರ ಶಿಕ್ಷಣಾಧಿಕಾರಿ,ಮಂಗಳೂರು ಉತ್ತರ ವಲಯ)ಅವರು ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಯಾಝ್ ಅಹ್ಮದ್ ಕಣ್ಣೂರ್ (ಅಧ್ಯಕ್ಷರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು) ವಹಿಸಿದರು. ರಫೀಕ್ ಮಾಸ್ಟರ್ (ಶಿಕ್ಷಣ ತಜ್ಞ ಮತ್ತು ಪ್ರೇರಣಾ ತರಬೇತುದಾರರು) ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರಿಫ್ ಪಡುಬಿದ್ರೆ (ಪ್ರ.ಕಾರ್ಯದರ್ಶಿ ಎಮ್.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಶ್ರೀ ಲಕ್ಷ್ಮೀ ನಾರಾಯಣ (ವಿಷಯ ಪರಿವೀಕ್ಷಕರು, ಡಿ.ಡಿ.ಪಿ.ಐ ದ.ಕ.ಜಿಲ್ಲೆ)  ಸೀಮ ಎ.ಕೆ.(ಪ್ರಾಂಶುಪಾಲರು, ಬದ್ರಿಯಾ ಪದವಿ ಪೂರ್ವ ಕಾಲೇಜು ಕಂದಕ್) ಯೂಸುಫ್ (ಮಾಜಿ ಪ್ರಾಂಶುಪಾಲರು ಬದ್ರಿಯಾ ಪದವಿ ಪೂರ್ವ ಕಾಲೇಜು) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅಬ್ದುಲ್ ಹಮೀದ್ ಕಣ್ಣೂರ್ (ಪ್ರ ಕಾರ್ಯದರ್ಶಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್) ಸ್ವಾಗತಿಸಿದರು. ಕಾರ್ಯಕ್ರಮವನ್ನು ಮೊಹಮ್ಮದ್ ನಾಝಿಕ್ ಬಜಾಲ್ ನಿರೂಪಿಸಿದರು. ನಕಾಶ್ ಬಾಂಬಿಲ ವಂದಿಸಿದರು.


ಗಣಿತ ತರಬೇತುದಾರರಾಗಿ ಆಶಾ ವಾಸ್ ಸರಕಾರಿ ಪ್ರೌಢ ಶಾಲೆ ನಾಲ್ಯಪದವು ತರಬೇತಿ ನೀಡಿದರು. ಅಭಿಯಾನದಲ್ಲಿ ಬದ್ರಿಯಾ ಪ್ರೌಢ ಶಾಲೆ ಕಂದಕ್, ಸರಕಾರಿ ಉರ್ದು ಪ್ರೌಢ ಶಾಲೆ ಕಸೈಗಲ್ಲಿ, ಸರಕಾರಿ ಪ್ರೌಢ ಶಾಲೆ ಕಸಬ ಬೆಂಗರೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.













 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News