ಮಂಗಳೂರು: ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ವಂಚನೆ ಆರೋಪ; ದೂರು ದಾಖಲು

Update: 2025-01-07 17:22 GMT

ಮಂಗಳೂರು, ಜ.7: ಪೆಟ್ರೋಲ್ ಬಂಕ್‌ನ ಸೂಪರ್‌ವೈಸರ್‌ನೊಬ್ಬ ವೈಯಕ್ತಿಕ ಖಾತೆಯ ಕ್ಯುಆರ್ ಕೋಡ್‌ನ್ನು ಹಾಕಿ 58.85 ಲಕ್ಷ ರೂ. ವಂಚಿಸಿರುವ ಬಗ್ಗೆ ದೂರು ನೀಡಲಾಗಿದೆ.

ಬಂಗ್ರಕೂಳೂರಿನ ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನಲ್ಲಿ ಸೂಪರ್‌ವೈಸರ್ ಆಗಿದ್ದ ಮೋಹನದಾಸ್ ಎಂಬಾತ ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯ ಜವಾಬ್ದಾರಿ ನೋಡಿಕೊಂಡಿದ್ದ. ಈತ 2023ರ ಮಾ.1ರಿಂದ ಜು.31ರವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಬಂಕ್‌ನ ಕ್ಯುಆರ್ ಕೋಡ್ ತೆಗೆದು ವೈಯಕ್ತಿಯ ಖಾತೆಯ ಕ್ಯುಆರ್ ಕೋಡ್‌ನ್ನು ಅಳವಡಿಸಿ ಗ್ರಾಹಕರಿಗೆ ಬಂಕ್‌ನದ್ದೇ ಕ್ಯು ಆರ್ ಕೋಡ್ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್ ಔಟ್‌ಲೆಟ್ ಫ್ಯುಯೆಲ್ ಬಂಕ್‌ನ ಮ್ಯಾನೇಜರ್ ನಗರದ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News