ಡಿ.7: ಎಸ್‌ಜೆಎಂ ಕೇಂದ್ರ ಸಮಿತಿ ನಾಯಕರಿಗೆ ರಾಜ್ಯ ಸಮಿತಿಯಿಂದ ಗೌರವಾರ್ಪಣೆ

Update: 2024-12-03 16:03 GMT

ಮಂಗಳೂರು: ಮೂರೂವರೆ ದಶಕಗಳಿಂದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಗೆ ನಾಯಕತ್ವ ನೀಡುತ್ತಿರುವ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್, ಕೆ.ಕೆ.ಅಹ್ಮದ್ ಕುಟ್ಟಿ ಮುಸ್ಲಿಯಾರ್, ಅಬೂಹನೀಫಲ್ ಫೈಝಿ, ವಿ.ಪಿ.ಎಂ. ಫೈಝಿ ವಿಲ್ಯಾಪಳ್ಳಿ, ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊ.ಎ.ಕೆ.ಅಬ್ದುಲ್ ಹಮೀದ್ ಮತ್ತಿತರ ನಾಯಕರಿಗೆ ಎಸ್‌ಜೆಎಂ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಡಿ.7ರಂದು ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಂಗಣದಲ್ಲಿ ಗೌರವಾರ್ಪಣಾ ಸಮಾವೇಶವನ್ನು ಆಯೋಜಿಸಲಾಗಿದೆ.

ಖುದುವತುಸ್ಸಾದಾತ್ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ನೀಡಲಿರುವರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸಭೆಯನ್ನು ಉದ್ಘಾಟಿಸುವರು.

ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಡಾ.ಅಬ್ದುರ‌್ರಶೀದ್ ಝೈನಿ ಮುಖ್ಯ ಪ್ರಭಾಷಣ ನಡೆಸುವರು. ಸ್ಪೀಕರ್ ಯು.ಟಿ. ಖಾದರ್, ಯು.ಟಿ.ಇಫ್ತಿಕಾರ್, ಎಸ್.ಎಂ.ಎ. ರಾಜ್ಯಾಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ, ಮದನೀಸ್ ಕೇಂದ್ರ ಸಮಿತಿ ಅಧ್ಯಕ್ಷ ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಙಳ್, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಸಅದೀಸ್ ರಾಜ್ಯಾಧ್ಯಕ್ಷ ಮಲ್ಲೂರು ಅಶ್ರಫ್ ಸಅದಿ, ಸಖಾಫೀಸ್ ರಾಜ್ಯಾ ಧ್ಯಕ್ಷ ಅಶ್‌ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ, ಎಸ್‌ಜೆಎಂ ಕೇಂದ್ರ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಕುಂಞಿ ಕುಳಂ, ವಿದ್ಯಾಭ್ಯಾಸ ಬೋರ್ಡ್ ಮ್ಯಾನೇಜರ್ ಸೈದಲವಿ ಮಾಸ್ಟರ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ದರ್ಗಾ ಕಾರ್ಯದರ್ಶಿ ಶಿಹಾಬ್ ಸಖಾಫಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಶಾಫಿ ಸಅದಿ ಬೆಂಗಳೂರು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಕಾವಳಕಟ್ಟೆ ಹಜ್ರತ್, ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಭಾಗವಹಿಸಲಿರುವರು. ಎಸ್‌ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಜೆಪ್ಪುಅಬ್ದುರ‌್ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸುವರು. ಉಳ್ಳಾಲ ದರ್ಗಾ ವಠಾರದಿಂದ ಅಂದು ಮಧ್ಯಾಹ್ನ 1ಕ್ಕೆ ಮಂಜನಾಡಿಯಲ್ಲಿ ನಡೆಯುವ ಸಭಾ ವೇದಿಕೆವರೆಗೆ ವಾಹನ ಜಾಥಾದ ಮೂಲಕ ಗೌರವಾರ್ಪಣೆ ಸ್ವೀಕರಿಸಲಿರುವ ನಾಯಕರನ್ನು ಕರೆತರಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News