ಉಮ್ರಾ ಯಾತ್ರೆಯಲ್ಲಿದ್ದ ಮುಲ್ಕಿ ಕೊಲ್ನಾಡು ನಿವಾಸಿ ನಿಧನ

Update: 2024-12-03 17:38 GMT

ಮುಲ್ಕಿ: ಉಮ್ರಾ ಯಾತ್ರೆಯಲ್ಲಿದ್ದ ಮುಲ್ಕಿ ಕೊಲ್ನಾಡು ನಿವಾಸಿ ಹುಸೈನ್‌ ( 62) ಅವರು ತೀವ್ರ ಜ್ವರ ಬಾಧಿತರಾಗಿ ಮಕ್ಕಾದಲ್ಲಿ ನಿಧನರಾದ ಘಟನೆ ಮಂಗಳವಾರ ವರದಿಯಾಗಿದೆ.

ಇಲ್ಲಿನ ಕೊಲ್ನಾಡ್ ಕೆ.ಸೆ. ರಾವ್‌ ನಗರದ ಶಾಫಿ ಜುಮ್ಮಾ ಮಸೀದಿ ಇದರ ಆಡಳಿತ ಸಮಿತಿಯ ಸದಸ್ಯರಾಗಿದ್ದ ಹುಸೈನ್‌  ಅವರು ‌ಕಳೆದ ವಾರ ತನ್ನ ಪತ್ನಿಯೊಂದಿಗೆ ಉಮ್ರಾಯಾತ್ರೆ ಕೈಗೊಂಡಿದ್ದರು. ಸೋಮವಾರದ ವರೆಗೆ ಮದೀನದಲ್ಲಿ ತಂಗಿದ್ದ ಇವರು, ಮಂಗಳವಾರ ಮಕ್ಕಾಕ್ಕೆ ಆಗಮಿಸಿದ್ದರು. ಈ ವೇಳೆ ತೀವ್ರ ಜ್ವರ ಕಾಣಿಸಿಕೊಂಡು ಮಕ್ಕಾದಲ್ಲಿ ನಿಧನರಾದರೆಂದು ತಿಳಿದು ಬಂದಿದೆ.

ಅವರು ಪತ್ನಿ, ಮೂವರು ಗಂಡು ಮತ್ತು ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮಕ್ಕಾದ ಮಸೀದಿ ಯಲ್ಲಿ ಬುಧವಾರ ದಫನ ಕಾರ್ಯ ನೆರವೇರಲಿದೆ ಎಂದು ಕುಂಟುಂಬದ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News