ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ 8ನೇ ರಾಷ್ಟ್ರೀಯ ಆರ್ಯರ್ವೇದ ದಿನಾಚರಣೆ

Update: 2023-11-10 10:30 GMT

ಮಂಗಳೂರು, ನ.10; ದ.ಕ ಜಿಲ್ಲಾ ಡಳಿತ,ಜಿಲ್ಲಾ ಪಂಚಾಯತ್, ವೆನ್ಲಾಕ್ ಆಯುಷ್ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ 8ನೆ ರಾಷ್ಟ್ರೀಯ ಆರ್ಯುವೇದ ದಿನಾಚರಣೆಗೆ ಮ.ನ.ಪಾ ಮೇಯರ್ ಸುಧೀರ್ ಶೆಟ್ಟಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಯುರ್ವೇದ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ದೇಶದ ಜನಕ್ಕೆ ಪರಿಚಯಿಸಿದ ತಜ್ಞರನ್ನು ನೆನಪಿಸುವ ನಿಟ್ಟಿನಲ್ಲಿ ಆರ್ಯು ವೇದ ದಿನಾಚರಣೆಗೆ ಮಹತ್ವವಿದೆ. ಸ್ಮಾರ್ಟ್ ಸಿಟಿಯ ಮೂಲಕ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲು ನೆರವು ನೀಡಿದೆ ಎಂದು ತಿಳಿಸಿದರು.

ಆರೋಗ್ಯ ಸಂರಕ್ಷಣೆಯ ಪ್ರಾಚೀನ ಕಾಲದಿಂದ ದೇಶದಲ್ಲಿ ಹುಟ್ಟಿ ಬೆಳೆದ ಭಾರತ ದೇಶದ ಸಂಪತ್ತು ಆರ್ಯುವೇದ.ಅದನ್ನು ಇನ್ನಷ್ಟು ಜನರಿಗೆ ದೊರೆಯುವಂತಾಗಬೇಕು ಎಂದು ಡಾ.ಆಶಾಜ್ಯೋತಿ ರೈ ತಿಳಿಸಿದರು.

ಕಲ್ಲಿಕೋಟೆಯ ಕ್ಯಾನ್ಸರ್ ತಜ್ಞರಾದ ಡಾ.ಜನ್ನಾತುಲ್ ಫಿರ್ದೌಸ್, ಆರ್ಯುವೇದ ವಿಶೇಷ ಉಪನ್ಯಾಸದಲ್ಲಿ ಕ್ಯಾನ್ಸರ್ ರೋಗ ಮತ್ತು ಅದರ ಲಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ವೆನ್ಲಾಕ್ ಆಯುಷ್ ಆಸ್ಪತ್ರೆಯ ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಮಾತನಾಡಿದರು.

ಸಮಾರಂಭದಲ್ಲಿ ಆಯುಷ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಸೈಯ್ಯದ್ ಝಾಹಿದ್ ಹುಸೈನ್, ಡಾ.ಅಜಿತ್ ನಾಥ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News