ಮಾರ್ಸೆಲ್ ಎಂ. ಡಿಸೋಜರ ‘ಚುಟುಕಾಂ’ ಕೃತಿ ಬಿಡುಗಡೆ

Update: 2024-09-21 07:35 GMT

ಮಂಗಳೂರು, ಸೆ.21: ಜೆನೆಸಿಸ್ ಪ್ರಕಾಶನದ ವ್ಯವಸ್ಥಾಪಕ ಮಾರ್ಸೆಲ್ ಎಂ. ಡಿಸೋಜರ ‘ಚುಟುಕಾಂ’ ಕೃತಿಯನ್ನು ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕೊಂಕಣಿ ಭಾಷೆಯಲ್ಲಿ ಬರೆಯುವರ ಸಂಖ್ಯೆ ಕಡಿಮೆ. ಇಂತಹ ಸಮಯದಲ್ಲಿ ಮಾರ್ಸೆಲ್\ ತಮ್ಮ ಕೃತಿಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ ಎಂದರು.

ಈವರೆಗೆ ಕೊಂಕಣಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 15 ಪುಸ್ತಕಗಳನ್ನು ಹಾಗೂ ಇಂಗ್ಲಿಷ್ ನಲ್ಲಿ 2 ಪುಸ್ತಕಗಳನ್ನು ಪ್ರಕಟಿಸಿದ್ದು, ಮುಂದೆ ಮೂರು ಪುಸ್ತಕಗಳನ್ನು ಮಕ್ಕಳಿಗಾಗಿ ಈ ವರ್ಷದ ಅಂತ್ಯದೊಳಗೆ ಪ್ರಕಟ ಮಾಡುವ ಗುರಿ ಇದೆ. ಈ ಕೃತಿಯಲ್ಲಿ 400 ಚುಟುಕುಗಳಿವೆ. ಪ್ರೀತಿ, ವಿರಸ, ಚಿಂತೆ, ಭಯ, ಭವಿಷ್ಯದ ಹೇಳಿಕೆ, ಧರ್ಮ, ರಾಜಕೀಯ, ಸಮುದಾಯದ ಬಗ್ಗೆ ಚಿಂತನೆ ಹಾಗೂ ಪ್ರತಿಭಟನೆಯ ಚುಟುಕುಗಳು ಈ ಕೃತಿಯಲ್ಲಿವೆ ಎಂದು ಮಾರ್ಸೆಲ್ ಡಿಸೋಜ ತಿಳಿಸಿದರು.

1971ರಿಂದ 2024ರ ವರೆಗೆ ತನ್ನ ಸಂಗ್ರಹದಲ್ಲಿದ್ದ ಚುಟುಕುಗಳನನು ಒಟ್ಟುಗೂಡಿ 50 ವರ್ಷಗಳ ಕೊಂಕಣಿ ಸಾಹಿತ್ಯ ಸೇವೆಯ ಸಂಭ್ರಮೋತ್ಸವದ ಸವಿ ನೆನಪಿಗಾಗಿ ಈ ಕೃತಿ ಪ್ರಕಟಿಸಲಾಗಿದೆ. ಮುನ್ನಡಿಯನ್ನು ಕೊಂಕಣಿ ಹಿರಿಯ ಸಾಹಿತಿ, ನಾಟಕಕಾರ, ಪತ್ರಕರ್ತ ಡೊಲ್ಪಿ ಲೋಬೊ ಬರೆದಿದ್ದಾರ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕೊಂಕಣಿ ಸಾಹಿತಿ ಜೆ.ಎಫ್. ಡಿಸೋಜ, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮಹೇಶ್ ನಾಯಕ್, ಮಾರ್ಸೆಲ್ ಡಿಸೋಜರ ಪತ್ನಿ ಜಾನೆಟ್ ಡಿಸೋಜ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News