ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ ʼಸ್ವರ್ಣಕೃತಿʼ ಅನಾವರಣ

Update: 2024-11-15 14:57 GMT

ಮಂಗಳೂರು, ನ.15: ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಸ್ವರ್ಣಕೃತಿಯ ಅನಾವರಣ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುನೀಶ್ ವೋರ್ಲ್ಡ್ ಆಫ್ ಬ್ಯೂಟಿ, ಸುನೀಶ್ ಮೇಕ್‌ಅಪ್ ಸ್ಟುಡಿಯೋದ ಮಾಲಕಿ ಸುನೀಶಾ ಸಶಾಂಕ್ ಸ್ವರ್ಣಕೃತಿಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯ ಸಿಬ್ಬಂದಿ ವರ್ಗವು ಗ್ರಾಹಕರ ಮನತೃಪ್ತಿಗೊಳಿಸುವಂತಹ ಸೇವೆಯನ್ನು ನೀಡುತ್ತದೆ. ಅದುವೇ ಇದರ ಯಶಸ್ಸಿನ ಗುಟ್ಟಾಗಿದೆ. ಇಲ್ಲಿ ಗ್ರಾಹಕರ ನಿರೀಕ್ಷೆಗೂ ಮೀರಿದ ಕರಕುಶಲ ಚಿನ್ನದ ಆಭರಣಗಳ ಅಪೂರ್ವ ಸಂಗ್ರಹವಿದೆ ಎಂದರು.

ಈ ಸಂದರ್ಭ ಮಳಿಗೆಯ ಸ್ಟೋರ್ ಹೆಡ್ ಶರತ್‌ ಚಂದ್ರನ್, ಶೋರೂಮ್ ಮ್ಯಾನೇಜರ್ ರಘುರಾಮ್, ಸೇಲ್ಸ್ ಮ್ಯಾನೇಜರ್ ಗಿರೀಶ್, ಡೆಪ್ಯುಟಿ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೊನಾಲ್ ಸುವರ್ಣ ಉಪಸ್ಥಿತರಿದ್ದರು.

ನುರಿತ ಕರಕುಶಲಕರ್ಮಿಗಳಿಂದ ಸಿದ್ಧಪಡಿಸಲಾದ ಈ ಚಿನ್ನದ ಆಭರಣಗಳ ಸಂಗ್ರಹವು ಆಧುನಿಕತೆಯೊಂದಿಗೆ ಸಂಪ್ರದಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ಪ್ರತೀ ಖರೀದಿಗೆ ಗುಣಮಟ್ಟ, ಪಾರದರ್ಶಕತೆ ಮತ್ತು ಮೌಲ್ಯವನ್ನು ಖಚಿತ ಪಡಿಸುತ್ತದೆ. ತೂಕ, ಕಲ್ಲಿನ ತೂಕ, ನಿವ್ವಳ ತೂಕ, ಕಲ್ಲಿನ ಶುಲ್ಕಗಳು ಮತ್ತು ಮೇಕಿಂಗ್ ಜಾರ್ಜ್‌ಗಳನ್ನು ನಿರ್ದಿಷ್ಟವಾಗಿ ತಿಳಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.






















Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News