ಒಳ ಮೀಸಲಾತಿಗೆ ಮುಂಡಾಲ ಸಮುದಾಯ ವಿರೋಧ

Update: 2024-11-15 15:38 GMT

ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ನೇತೃತ್ವದಲ್ಲಿ ದ.ಕ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಮುಂಡಾಲ ಸಮುದಾಯದ ಮುಖಂಡರ ಸಭೆಯು ಬಿಜೈ ಕಾಪಿಕಾಡ್‌ನ ಕುದ್ಮುಲ್ ರಂಗರಾವ್ ಸ್ಮಾರಕ ಭವನದಲ್ಲಿ ಜರುಗಿತು.

ರಾಜ್ಯ ಸರಕಾರದಿಂದ ಈಗಾಗಲೇ ಒಳಮೀಸಲಾತಿ ಕಲ್ಪಿಸಿರುವ, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಿದಲ್ಲಿ ಮುಂಡಾಲ ಸಮುದಾಯಕ್ಕೆ ಭಾರೀ ಅನ್ಯಾಯವಾಗಲಿದೆ. ದ.ಕ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಮುಂಡಾಲ ಸಮುದಾಯದ ಸ್ಪಷ್ಟ ದಾಖಲೆಯನ್ನು ಪಡೆಯದೆ ಜಾರಿಗೊಳಿಸಲು ಉದ್ದೇಶಿಸಿ ರುವ ಈ ಒಳ ಮೀಸಲಾತಿಯು ಅವೈಜ್ಞಾನಿಕವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತು, ಸರಕಾರಿ ನೌಕರರಿಗೆ ಉದ್ಯೋಗ, ಮುಂಬಡ್ತಿ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಎಲ್ಲಾ ಸೌಲಭ್ಯದಿಂದ ಮುಂಡಾಲ ಸಮುದಾಯದ ಅಭಿವೃದ್ಧಿ ವಂಚಿತವಾಗಲಿದೆ. ಹಾಗಾಗಿ ಈಗ ಜಾರಿಗೊಳಿಸಲು ಉದ್ದೇಶಿಸಿರುವ ಅವೈಜ್ಞಾನಿಕವಾದ ಒಳ ಮೀಸಲಾತಿಯನ್ನು ತಡೆ ಹಿಡಿದು ಈ ಹಿಂದಿನ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಸಭೆ ಆಗ್ರಹಿಸಿತು.

ಸಭೆಯಲ್ಲಿ ಕಚೂರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ ಕ್ಷೇತ್ರದ ಆಡಳಿತ ಸಮಿತಿ, ಮುಂಡಾಲ ಮಹಾಸಭಾ ಉಡುಪಿ, ಮುಂಡಾಲ ಯುವ ವೇದಿಕೆ, ಪಡುಬಿದ್ರಿ, ಪ.ಜಾತಿ, ಪಂಗಡ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಹಾಗೂ ಬಬ್ಬುಸ್ವಾಮಿ ದೈವಸ್ಥಾನಗಳ ಪ್ರಮುಖರು, ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News