ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ

Update: 2023-11-12 14:49 GMT

ಮಂಗಳೂರು, ನ.12: ನಗರದ ಉರ್ವ ಮಾರ್ಕೆಟ್ ಬಳಿ ಮಾದಕ ವಸ್ತು ಸೇವಿಸಿ ತೂರಾಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಕೃಷ್ಣಾಪುರ ಕೋರ್ದಬ್ಬು ದೈವಸ್ಥಾನದ ಬಳಿಯ ನಿವಾಸಿ ತಿಲಕ್‌ರಾಜ್ (28) ಬಂಧಿತ ಆರೋಪಿ. ಗಾಂಜಾ ಸೇವಿಸಿ ತೂರಾಡುತ್ತಿದ್ದ ಈತನನ್ನು ವಿಚಾರಣೆಗೊಳಪಡಿಸಿ ಬಳಿಕ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಮಾದಕ ದ್ರವ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News