ಆಲೆಟ್ಟಿ ಲಕ್ಷ್ಮೀ ಸಂಜೀವಿನಿ ಗ್ರಾಪಂ ಒಕ್ಕೂಟ ಸಾಧಕರಿಗೆ ಸನ್ಮಾನ
Update: 2025-03-27 18:01 IST

ಸುಳ್ಯ: ಆಲೆಟ್ಟಿ ಗ್ರಾಪಂ ಸಭಾಭವನದಲ್ಲಿ ನಡೆದ ಲಕ್ಷ್ಮೀ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇತ್ತೀಚೆಗೆ ಸಂಜೀವಿನಿ ಹೇರ್ ಆಯಿಲ್ ಪ್ರಾಡಕ್ಟ್ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾದ ಸರೋಜಿನಿ ಕಾಪುಮಲೆ, ಸಂಜೀವಿನಿ ಸಂಘದ ಮಾಜಿ ಅಧ್ಯಕ್ಷೆ ಅನಿತಾ ಬಡ್ಡಡ್ಕ, ಹಿರಿಯ ಸದಸ್ಯೆ ಗೌರಿ ಆಲೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಅರುಣ ಕುಮಾರಿ, ಗ್ರಾಪಂ ಅಧ್ಯಕ್ಷೆ ವೀಣಾ ವಸಂತ, ವಲಯ ಮೇಲ್ವಿಚಾರಕ ಮಹೇಶ್, ತಾಲೂಕು ಕೃಷಿ ವ್ಯವಸ್ಥಾಪಕ ಜೀವನ್ ಪ್ರಾಕಾಶ್, ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕಿ ಸುಜಾತಾ, ಗ್ರಂಥಪಾಲಕಿ ರಾಜೇಶ್ವರಿ, ಡಾಟ ಆಪರೇಟರ್ ನೇತ್ರಾ ಮತ್ತಿತರರಿದ್ದರು.