ಮಂಗಳೂರು: ಬ್ಯಾಂಕ್ ನೌಕರ ನಾಪತ್ತೆ
Update: 2025-03-30 13:27 IST
ಮಂಗಳೂರು, ಮಾ.30: ನಗರದ ಮಂಗಳೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ದೀಪಕ್ ಪ್ರಭು (39) ಎಂಬವರು ಮಾ.27ರಿಂದ ಕಾಣೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ಸಂಜೆ 4:30ಕ್ಕೆ ತನ್ನ ಮೊಬೈಲ್ ಪೋನನ್ನು ಸೆಂಟ್ರಲ್ ರೈಲ್ವೇ ಸ್ಟೇಷನ್‌ನಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಮನೆಮಂದಿ ಎಲ್ಲೆಡೆ ಹುಡುಕಾಡಿದರೂ ಈವರೆಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸುಮಾರು 6 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಶರೀರದ, ಕನ್ನಡ, ತುಳು, ಕೊಂಕಣಿ ಮಾತನಾಡಬಲ್ಲ ದೀಪಕ್ ಪ್ರಭು ಮನೆಯಿಂದ ಹೊರಗೆ ಹೋಗುವಾಗ ತಿಳಿ ನೀಲಿ ಬಣ್ಣದ ಉದ್ದತೋಳಿನ ಅಂಗಿ, ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು.
ಇವರನ್ನು ಕಂಡವರು (ದೂ.ಸಂ: 0824-220533/ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0824-2220800) ನ್ನು ಸಂಪರ್ಕಿಸಬಹುದು ಎಂದು ಕಾವೂರು ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.