ಸುಳ್ಯ: ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಕಾರು

Update: 2025-03-31 21:48 IST
ಸುಳ್ಯ: ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಕಾರು
  • whatsapp icon

ಸುಳ್ಯ: ಕಾರೊಂದು ನಿಯಂತ್ರಣ ತಪ್ಪಿ ಮನೆಯ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ.

ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು. ಚಿರೆಕಲ್‍ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್‍ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮೇಲೆ ಬಿದ್ದಿದೆ.

ಘಟನೆಯಲ್ಲಿ ಕಾರು ಮತ್ತು ಮನೆ ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕಿ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ಮನೆಯ ಮೇಲ್ಛಾವಣಿಯಿಂದ ತೆಗೆಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News