ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಮೆಲ್ವಿನ್ ರೊಡ್ರಿಗಸ್ ನೇಮಕ

Update: 2025-04-01 21:58 IST
ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಮೆಲ್ವಿನ್ ರೊಡ್ರಿಗಸ್ ನೇಮಕ
  • whatsapp icon

ಮಂಗಳೂರು : ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಕವಿ, ಸಾಹಿತಿ ಮೆಲ್ವಿನ್ ರೊಡ್ರಿಗಸ್ ಇತ್ತೀಚೆಗೆ ನೇಮಕಗೊಂಡಿದ್ದಾರೆ.

24 ರಾಷ್ಟ್ರೀಯ ಭಾಷೆಗಳ ಸಾಹಿತ್ಯದ ಶ್ರೇಯೋಭಿವೃದ್ದಿಗಾಗಿ1954 ರಿಂದ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ ಸಾಹಿತ್ಯ ಅಕಾಡೆಮಿಯಾಗಿದೆ. ಇದರ ಪಶ್ಚಿಮ ಪ್ರಾದೇಶಿಕ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಗಳಿದ್ದು, ಪ್ರಸ್ತುತ ಮೆಲ್ವಿನ್ ರೊಡ್ರಿಗಸ್ ಕೊಂಕಣಿ ಭಾಷಾ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News