ಮಂಗಳಾ ಕ್ರೀಡಾಂಗಣಕ್ಕೆ ನೀರು ಶುದ್ಧೀಕರಣ ಘಟಕ ಕೊಡುಗೆ

Update: 2025-04-03 19:18 IST
ಮಂಗಳಾ ಕ್ರೀಡಾಂಗಣಕ್ಕೆ ನೀರು ಶುದ್ಧೀಕರಣ ಘಟಕ ಕೊಡುಗೆ
  • whatsapp icon

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಮಂಗಳಾ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಸುಮಾರು 600ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ದೈನಂದಿನ ತರಬೇತಿ ಹಾಗೂ ಅಭ್ಯಾಸವನ್ನು ನಡೆಸುತ್ತಿರುತ್ತಾರೆ. ಈ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದಡಿ 1 ಲಕ್ಷ ರೂ. 2 ವಾಟರ್ ಪ್ಯೂರಿಫೈಯರ್‌ಗಳನ್ನು ಒದಗಿಸಲಾಗಿದೆ.

ಎ.1ರಂದು ನಡೆದ ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಮುಖ್ಯಸ್ಥ ಮತ್ತು ಜನರಲ್ ಮ್ಯಾನೇಜರ್ ರೇಣು ನಾಯರ್, ಪ್ರಾದೇಶಿಕ ಮುಖ್ಯಸ್ಥ ರಾಜಮಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಖಜಾಂಚಿ ಕೃಷ್ಣ ಶೆಣೈ, ದ.ಕ.ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಪುರಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News