ಗಾಂಜಾ ಸೇವನೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ
Update: 2025-04-03 19:44 IST

ಮಂಗಳೂರು, ಎ.3: ನಗರದ ಶಿವಬಾಗ್ ಮತ್ತು ಬಿಕರ್ನಕಟ್ಟೆ ಬಳಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿಕರ್ನಕಟ್ಟೆ ಕಕ್ಕೆಬೆಟ್ಟು ನಿವಾಸಿ ಜ್ಞಾನೇಶ್ ರೈ (20) ಮತ್ತು ಬಿಕರ್ನಕಟ್ಟೆ ದತ್ತನಗರದ ಕೌಷಿಕ್ (21) ಬಂಧಿತ ಆರೋಪಿಗಳಾಗಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇಬ್ಬರ ವಿರುದ್ಧವೂ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.