ಎಂಬಿಬಿಎಸ್: ಅಫ್ಲಾರಿಗೆ 3 ವರ್ಷಗಳಲ್ಲಿ 9 ಚಿನ್ನದ ಪದಕ

ಮಂಗಳೂರು, ಎ.3: ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ಕಾಲೇಜಿನ ವಿದ್ಯಾರ್ಥಿನಿ ಅಫ್ಲಾ ಎಂಬಿಬಿಎಸ್ ಪರೀಕ್ಷೆಯಲ್ಲಿ ಮೂರು ವರ್ಷಗಳಲ್ಲಿ 9 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಬಜ್ಪೆ ನಿವಾಸಿ ಮುಹಮ್ಮದ್ ರಫೀಕ್ ಮತ್ತು ಫಾತಿಮಾ ಮುಹಮ್ಮದ್ ರಫೀಕ್ ದಂಪತಿಯ ಪುತ್ರಿ ಅಫ್ಲಾ ಸದ್ಯ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.
ಮೊದಲನೇ ವರ್ಷ ಅಂಗ ರಚನಾಶಾಸ್ತ್ರ, ಜೀವ ರಸಾಯನಶಾಸ್ತ್ರ, ಶರೀರಶಾಸ್ತ್ರ ಮತ್ತು ಸಮಗ್ರ ಒಂದು ಸೇರಿದಂತೆ 4 ಪದಕಗಳು ಲಭಿಸಿದ್ದರೆ, ಎರಡನೇ ವರ್ಷ - ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ಮತ್ತು ಸಮಗ್ರ ಒಂದು ಸೇರಿದಂತೆ 3 ಪದಕಗಳು, ಮೂರನೇ ವರ್ಷ ಕಿವಿ, ಮೂಗು, ಗಂಟಲು ರೋಗಶಾಸ್ತ್ರ ಮತ್ತು ಸಮಗ್ರ ಒಂದು ಸೇರಿದಂತೆ ಎರಡು ಪದಕಗಳನ್ನು ಗಳಿಸಿದ್ದಾರೆ.
ಮೂರು ವರ್ಷಗಳಲ್ಲಿ ಒಟ್ಟು 9 ಚಿನ್ನದ ಪದಕಗಳನ್ನು ಪಡೆದಿರುವ ಅಫ್ಲಾ ಪದವಿಯ ಅಂತಿಮ ವರ್ಷ(4ನೇ ವರ್ಷ)ದಲ್ಲಿ ಇನ್ನೂ ಎರಡು (ಪೀಡಿಯಾಟ್ರಿಕ್ಸ್ ಮತ್ತು ಸಮಗ್ರ) ಪದಕಗಳು ಲಭಿಸುವುದು ಖಚಿತವಾಗಿದೆ ಎಂದು ಅಫ್ಲಾ ತಿಳಿಸಿದ್ದಾರೆ.