ಮದ್ರಸ ಪಬ್ಲಿಕ್ ಪರೀಕ್ಷೆ : 5ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸನಗೆ 600ರಲ್ಲಿ 600 ಅಂಕ
Update: 2025-04-06 18:24 IST

ಫಾತಿಮತ್ ಸನ
ಮಂಗಳೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ 5 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ ಈಸ್ಟ್ ಜಿಲ್ಲೆಯ ಮಡಂತ್ಯಾರು ರೇಂಜ್ ವ್ಯಾಪ್ತಿಯ ನೂರುಲ್ ಹುದಾ ಮದ್ರಸ ಮಡಂತ್ಯಾರು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸನ 600 ರಲ್ಲಿ 600 ಅಂಕಗಳಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ನೊಂದಿಗೆ ತೇರ್ಗಡೆ ಹೊಂದಿದ್ದಾಳೆ.
ವಿದ್ಯಾರ್ಥಿನಿ ಫಾತಿಮತ್ ಸನ, ಅಶ್ರಫ್ ಮತ್ತು ಸಬೀನ ದಂಪತಿಗಳ ಪುತ್ರಿ ಆಗಿರುತ್ತಾಳೆ.