ಮಂಗಳೂರು ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ವಿರುದ್ಧ ವಕೀಲರಿಂದ ಪ್ರತಿಭಟನೆ
Update: 2025-04-03 19:42 IST

ಮಂಗಳೂರು, ಎ.3: ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ನ್ಯಾಯಾಧೀಶರ ವಿರುದ್ಧವೇ ಯುವ ವಕೀಲರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ 1ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಯುವ ವಕೀಲೆಯನ್ನು ಪ್ರಕರಣದ ವಿಚಾರಣೆ ಸಂದರ್ಭ ಈಡಿಯಟ್ ಎಂದಿದ್ದ ಆರೋಪದಲ್ಲಿ ವಕೀಲರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನ್ಯಾಯಾಲಯ ಕಟ್ಟಡದ ಎದುರಲ್ಲಿ ಮುಖಕ್ಕೆ ಕಪ್ಪು ಬಟ್ಟೆ ತೊಟ್ಟು ಕೆಲ ಹೊತ್ತು ಮೌನ ಪ್ರತಿಭಟನೆ ನಡೆಸಿ ವಕೀಲರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಕರಣವೊಂದರ ವಿಚಾರಣೆ ಸಂದರ್ಭ ಯುವ ವಕೀಲೆಯೊಬ್ಬರು ತಪ್ಪು ಮಾತಾಡಿದ್ದಕ್ಕೆ ನ್ಯಾಯಾಧೀಶರು ಈಡಿಯಟ್ ಎಂದಿದ್ದರು ಎನ್ನಲಾಗಿದೆ. ಇದರಿಂದ ನೊಂದ ಜೂನಿಯರ್ ವಕೀಲರು ಸೇರಿ ಗುರುವಾರ ಬೆಳಗ್ಗೆ ಕೆಲ ಹೊತ್ತು ಮೌನ ಪ್ರತಿಭಟನೆ ನಡೆಸಿ ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.