ಪ್ರಕೃತಿಯ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಅಗತ್ಯ: ಆರ್.ಕೆ.ನಾಯರ್

Update: 2025-04-03 19:53 IST
ಪ್ರಕೃತಿಯ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಅಗತ್ಯ: ಆರ್.ಕೆ.ನಾಯರ್
  • whatsapp icon

ಮಂಗಳೂರು: ಪ್ರಕೃತಿಯನ್ನು ಸಂರಕ್ಷಣೆ ಮಾಡಬೇಕಾದರೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಅಗತ್ಯವಾಗಿ ಆಗಬೇಕು.ಪರಿಸರ ಸಂರಕ್ಷಣೆ ನಮ್ಮ ಮೊದಲ ಆಧ್ಯತೆ ಯಾಗ ಬೇಕು.ಎಂದು ಗ್ರೀನ್ ಹಿರೋ ಆಫ್ ಇಂಡಿಯಾ ಖ್ಯಾತಿಯ ಆರ್.ಕೆ.ನಾಯರ್ ತಿಳಿಸಿದ್ದಾರೆ.

ಅವರು ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಕೋ ಕ್ಲಬ್‌ ,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಸಹಯೋಗ ದೊಂದಿಗೆ ಬುಧವಾರ ಹಮ್ಮಿಕೊಂಡಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ ಇಂತಹ ಪ್ರಕೃತಿಯಲ್ಲಿ ಬುದ್ದಿವಂತ ಜೀವಿ ಎಂದು ಕರೆಸಿಕೊಂಡ ಮನುಷ್ಯನ ಸೃಷ್ಟಿ ಕೊನೆಯಲ್ಲಿ ಆಗಿದೆ ಆದಕಾರಣ ಈ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲಾ ಜೀವಿಗಳಿ ಗಿಂತ ಹೆಚ್ಚು ಮನುಷ್ಯ ನ ಮೇಲಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಅದೊಂದು ಅದ್ಭುತ ಸೃಷ್ಟಿ.ಅಲ್ಲಿನ ನಡೆಯುವ ಕ್ರೀಯೆಗಳನ್ನು ನಮಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ‌. ಇಲ್ಲಿ ಇರುವ ಪ್ರತಿ ಜೀವಿಗಳಿಗೂ ಈ ಭೂಮಿಯಲ್ಲಿ ವಾಸಿಸುವ ಹಕ್ಕಿದೆ ಎನ್ನುವುದನ್ನು ನಾವು ಅರಿತು ಕೊಳ್ಳಬೇಕು. ಒಂದು ಬಾರಿ ರಸ್ತೆ ಕಾಮಗಾರಿ ಮಾಡುತ್ತಿದ್ದಾಗ ಮರವೊಂದನ್ನು ಉರುಳಿ ನಾಶವಾದಾಗ ಅದನ್ನು ಆಶ್ರಯಿಸಿ ಕೊಂಡಿದ್ದ ಹಕ್ಕಿಗಳ ಗೂಡು ಬಿದ್ದು ಅದರ ಸಂಸಾರ ನಾಶವಾಯಿತು. ಆ ಹಕ್ಕಿಗಳ ರೋಧನ ನನಗೆ ಅರಣ್ಯ ನಿರ್ಮಿಸಲು ಪ್ರೇರಣೆಯಾಯಿತು ಹೀಗೆ ಆರಂಭಗೊಂಡ ಅಭಿಯಾನದ ಮೂಲಕ 12 ರಾಜ್ಯಗಳಲ್ಲಿ 122 ಕಾಡು ನಿರ್ಮಿಸಲು ಸಾಧ್ಯವಾಗಿದೆ. ವಿಶ್ವದ ಅತೀ ದೊಡ್ಡ ಮಿಯಾವಾಕಿ ಅರಣ್ಯ ಗುಜರಾತಿನ ಸ್ಮೃತಿ ವನ ನಿರ್ಮಾಣ ಮಾಡಿರು ವುದು ನನಗೆ ತೃಪ್ತಿ ತಂದಿದೆ ಎಂದು ಆರ್.ಕೆ.ನಾಯರ್ ವಿವರಿಸಿದರು.ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಸಮಾರಂಭದಲ್ಲಿ ಬಲ್ಮಠ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಬಾಳ, ಉಪನ್ಯಾಸಕಿ ಮಂಜುಳಾ ಮಲ್ಯ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ,ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್ ಗ್ರಾಹಕರ ಕ್ಲಬ್ ಸಂಯೋಜಕಿ ಮಂಜುಳಾ ಮಲ್ಯ,, ಇಕೋ ಕ್ಲಬ್ ಕಾರ್ಯದರ್ಶಿ ವೈಶಾಲಿ ಹಾಗೂ ಪದಾಧಿಕಾರಿಗಳು ಸದಸ್ಯರು ಉಪ ಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News