ಎ.8ಕ್ಕೆ ಸಮಸ್ತ ಮದ್ರಸಗಳು ಪುನರಾರಂಭ
ಮಂಗಳೂರು, ಎ.3: ಪ್ರಸಕ್ತ ಶೈಕ್ಷಣಿಕ ವರ್ಷದ ಸಮಸ್ತ ಜನರಲ್ ಸಿಲಬಸ್ ಅಂಗೀಕೃತ ದೇಶ-ವಿದೇಶಗಳ ಎಲ್ಲಾ ಮದ್ರಸಗಳು ಎ.8ರ (ಶವ್ವಾಲ್ 9) ಮಂಗಳವಾರ ಬೆಳಗ್ಗೆ ಪುನರಾರಂಭಗೊಳ್ಳಲಿದೆ.
ಎ.8ರಿಂದ 14ರ ತನಕ ಸಮಸ್ತದ ಎಲ್ಲಾ ಮದ್ರಸಗಳಲ್ಲಿ ಮಿಅರಜಾನುಲ್ ಬಿದಾಯ ಮದ್ರಸ ಪ್ರಾರಂಭೋ ತ್ಸವ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಅಡ್ಮಿಶನ್ ಮತ್ತು ನೂತನ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆ ಗಳು, ಪಠ್ಯಪುಸ್ತಕಗಳ ವಿತರಣೆಗಳು ನಡೆಯಲಿದೆ. ಹಾಗಾಗಿ ನಿಗದಿತ ದಿನಾಂಕದಲ್ಲೇ ಎಲ್ಲಾ ಮದ್ರಸಗಳು ಪ್ರಾರಂಭವಾಗಬೇಕಿದೆ.
ಮದ್ರಸ ಪ್ರಾರಂಭಗೊಂಡು ಕೆಲವೇ ದಿನಗಳಲ್ಲಿ ಶಾಲೆಗಳಿಗೂ ರಜೆಯಾಗಲಿರುವುದರಿಂದ ಬೇಸಿಗೆ ಪ್ರಯುಕ್ತ ಮದ್ರಸಗಳಿಗೆ ನೀಡಲಾಗುವ ಕೆಲವು ದಿನಗಳ ರಜೆಯ ಘೋಷಣೆಗಾಗಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ಗೆ ಮನವಿ ಸಲ್ಲಿಸಲಾಗಿದೆ. ವಿದ್ಯಾಭ್ಯಾಸ ಬೋರ್ಡ್ ಆದೇಶದ ದಿನಾಂಕಗಳಲ್ಲಿ ಮಾತ್ರ ಮದ್ರಸಗಳಿಗೆ ಹೆಚ್ಚುವರಿ ರಜೆಯನ್ನು ನೀಡಬಹುದಾಗಿದೆ ಎಂದು ಸಮಸ್ತ ಮುಫತ್ತಿಶ್ ಕೆ. ಎಂ. ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.