ಎ.3ರಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು , ಎ.1: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (ಎಫ್‌ಎಂಸಿಐ) ಪದವಿ ಪ್ರದಾನ ಸಮಾರಂಭ 2025ರ ಎ. 3 ರಿಂದ 5 ರವರೆಗೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 35ನೇ ಪದವಿ ಪ್ರದಾನ ಸಮಾರಂಭವು ಎ 3ರಂದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಸಂತ ಅಲೋಶಿಯೆಸ್ ಪರಿಗಣಿತ ವಿವಿ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೋಲ್ಕತ್ತಾದ ರಾಷ್ಟ್ರೀಯ ಹೋಮಿಯೋಪತಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಸುಭಾಸ್ ಸಿಂಗ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಟ್ಟು 89 ಬಿಎಚ್‌ಎಂಎಸ್ ಪದವೀಧರರು ಮತ್ತು 27 ಎಂಡಿ (ಹೊಂ.) ಸ್ನಾತಕೋತ್ತರ ಪದವೀಧರರು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದು, 17 ಮಂದಿ ರ್ಯಾಂಕ್ ವಿಜೇತರನ್ನು ಗೌರವಿಸಲಾಗುವುದು ಎಂದರು.
ಎ.4 ರಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭವು ನಡೆಯಲಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಮತ್ತು ಹೊಸದಿಲ್ಲಿಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ರಾಜೀವ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂಬಿಬಿಎಸ್ 153, ಪಿಜಿ ಮೆಡಿಕಲ್ 77, ಅಲೈಡ್ ಹೆಲ್ತ್ 135 ಯುಜಿ, 40 ಪಿಜಿ, ಮತ್ತು ಫಿಸಿಯೋಥೆರಪಿ 54 ಯುಜಿ, 10 ಪಿಜಿ ಸೇರಿದಂತೆ ಒಟ್ಟು 469 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ 61 ಮಂದಿ ರ್ಯಾಂಕ್ ಪಡೆದವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಎ. 5 ರಂದು ಫಾದರ್ ಮುಲ್ಲರ್ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಾದರ್ ಮುಲ್ಲರ್ ಕಾಲೇಜ್ (ಸ್ಪೀಚ್ ಮತ್ತು ಹಿಯರಿಂಗ್)ನ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ 243 ಪದವೀಧರರು ತಮ್ಮ ಪದವಿಗಳನ್ನು ಸ್ವೀಕರಿಸಲಿರುವರು.ಈ ಕಾರ್ಯಕ್ರಮವು ನರ್ಸಿಂಗ್ ಸ್ಕೂಲ್‌ನ 47 ಪದವೀಧರರನ್ನು, ನರ್ಸಿಂಗ್ ಕಾಲೇಜಿನ 141 ಪದವೀಧರರನ್ನು (ಬಿ.ಎಸ್ಸಿ., ಪೋಸ್ಟ್ ಬೇಸಿಕ್ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಸೇರಿದಂತೆ) ಮತ್ತು ವಾಕ್ ಮತ್ತು ಶ್ರವಣ ಕಾಲೇಜಿನ 55 ಪದವೀಧರರನ್ನು ಗೌರವಿಸಲಾಗುವುದು. ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಲ್ಲ ಪದವಿ ಪ್ರದಾನ ಸಮಾರಂಭಗಳ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನಾ ವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಫ್‌ಎಂಎಚ್‌ಸಿಆ್ಯಂಡ್‌ಎಚ್ ಆಡಳಿತಾಧಿಕಾರಿ ವಂ. ಫೌಸ್ಟಿನ್ ಲ್ಯೂಕಸ್ ಲೋಬೊ, ಎಫ್‌ಎಂಎಂಸಿ ಆಡಳಿತಾಧಿಕಾರಿ ವಂ. ಅಜಿತ್ ಬಿ. ಮಿನೇಜಸ್, ಎಫ್‌ಎಂಎಂಸಿಎಚ್ ಆಡಳಿತಾಧಿಕಾರಿ ವಂ. ಜಾರ್ಜ್ ಜೀವನ್ ಸಿಕ್ವೇರಾ, ಡಾ. ಇಎಸ್‌ಜೆ ಪ್ರಭು ಕಿರಣ್, ಡಾ. ಗಿರೀಶ್ ನಾವಡ, ರೆ|ಸಿ. ಧನ್ಯಾ ದೇವಾಸಿಯಾ, ಪ್ರೊ. ಸಿಂಥಿಯಾ ಸಾಂತ್‌ಮಯೋರ್, ಡಾ. ಆ್ಯಂಟನಿ ಸಿಲ್ವನ್ ಡಿ ಸೋಜ, ಡಾ.ಉದಯ್ ಕುಮಾರ್, ಡಾ. ಹಿಲ್ಡಾ ಡಿ ಸೋಜ, ಪ್ರೊ.ಚೆರಿಷ್ಮಾ ಡಿ ಸಿಲ್ವಾ , ಡಾ. ಶೆರ್ಲಿನ್, ಡಾ. ರೇಷಾಲ್ ಡಾ. ಕೆಲ್ವಿನ್ ಪಾಯ್ಸ್ , ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.