ಚಾರ್ಮಾಡಿ: ನೂರುಲ್ ಹುದಾ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿ ಅಸ್ತಿತ್ವಕ್ಕೆ
Update: 2025-04-01 11:20 IST

ಬೆಳ್ತಂಗಡಿ : ನೂರುಲ್ ಹುದಾ ಹಳೆ ವಿದ್ಯಾರ್ಥಿ ಸಂಘ ಇಸ್ಲಾಂಬಾದ್ ಚಾರ್ಮಾಡಿ ಇದರ ವಾರ್ಷಿಕ ಸಭೆ ಮಾ.21 ರಂದು ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರುಗಿತು. ಈ ಸಂದರ್ಭ 2025-2026 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ PP ಅಝೀಝ್, ಅಧ್ಯಕ್ಷರಾಗಿ ಅಡ್ವಕೇಟ್. ಅಯಾಝ್ ಚಾರ್ಮಾಡಿ, ಉಪಾಧ್ಯಕ್ಷರಾಗಿ ಇಲ್ಯಾಸ್ ಮೇಗಿನಮನೆ, ಕಾರ್ಯದರ್ಶಿಯಾಗಿ ಕುಂಞಿ ಮೇಗಿನಮನೆ, ಜೊತೆ ಕಾರ್ಯದರ್ಶಿಗಳಾಗಿ ಬದ್ರುದ್ದೀನ್ ಮೇಗಿನಮನೆ, ನೌಶಾದ್ ಮೇಗಿನಮನೆ, ಝಕಾರಿಯಾ ಹಾಗು ಶಾಜ್ಮಾನ್, ಖಜಾಂಜಿ ಆಗಿ ಖಲೀಲ್ ಅವರನ್ನು ಆಯ್ಕೆ ಮಾಡಲಾಯಿತು.
ನೂರುಲ್ ಹುದಾ ಹಳೆವಿದ್ಯಾರ್ಥಿ ಸಂಘವು ಹಲಾವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ.
ವೃತ್ತಿಯಲ್ಲಿ ವಕೀಲರಾಗಿರುವ ನೂತನ ಅಧ್ಯಕ್ಷ ಅಯಾಝ್ ಚಾರ್ಮಾಡಿ ಅವರು ಮಂಗಳೂರಿನ ಪ್ರಸಿದ್ಧ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ನ ವಕೀಲರಾಗಿರುತ್ತಾರೆ