ಕುಂಪಲ: ಶ್ರೀ ಬಾಲಕೃಷ್ಣ ಮಂದಿರದ ಪ್ರತಿಷ್ಠಾ ಮಹೋತ್ಸವ ಸಂಪನ್ನ

ಉಳ್ಳಾಲ: ಕುಂಪಲ ಶ್ರೀ ಬಾಲ ಕೃಷ್ಣ ಮಂದಿರ ಕುಂಪಲ 18ನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ ಟ್ರಸ್ಟ್ ನ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯರಾದ ಇಂದಾಜೆ ಪ್ರಭಾಕರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊರಗಜ್ಜ ಆದಿಸ್ಥಳದ ರಂಜಿತ್ ಸುಲಾಯ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶಕೀಲ ಕಾವ, ಕಿಶೋರ್ ಕೊಟ್ಟಾರಿ, ಅನ್ವಿತ್ ಎಲೆಕ್ಟ್ರಾನಿಕ್ಸ್ ಮಾಲಕ ಪ್ರಕಾಶ್, ಉದ್ಯಮಿ ಸುರೇಶ್ ಚಿತ್ರಾಂಜಲಿ ನಗರ, ತೀಯಾ ಸಮಾಜದ ಅಧ್ಯಕ್ಷ ಜಯಂತ್ ಕೊಂಡಾಣ, ಅಗಸ್ತ್ಯ ಬ್ರಿಗೇಡ್ ತೊಕ್ಕೊಟ್ಟು ಇದರ ಅಧ್ಯಕ್ಷ ರಕ್ಷಿತ್ ಡಿ.ಕೆ, ಉತ್ಸವ ಸಮಿತಿಯ ಅಧ್ಯಕ್ಷರವೀಂದ್ರ ಕುಂಪಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಅಂಚನ್ ಮೊದಲಾದವರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯದ ಎಂ.ಎ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾದ ವೀಕ್ಷಿತ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣ ಪೊನ್ನತ್ತೋಡು ಪ್ರಾರ್ಥಿಸಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.ಸೂರಜ್ ಸಾಗರ್ ವಂದಿಸಿದರು.