ಕಾನೂನು ರೀತಿಯಲ್ಲಿ ದೊರೆಯಬೇಕಿದ್ದ ಸವಲತ್ತುಗಳನ್ನು ಎಂಆರ್‌ಪಿಎಲ್‌ ನೀಡುತ್ತಿಲ್ಲ: ಗುತ್ತಿಗೆ ನೌಕರರ ಆರೋಪ

Update: 2025-04-04 23:02 IST
  • whatsapp icon

ಸುರತ್ಕಲ್‌: ಎಂಆರ್ಪಿಎಲ್‌ನಲ್ಲಿ ಗುತ್ತಿಗೆ ನೌಕರರಿಗೆ ಸಿಗಬೇಕಾಗಿರುವ ನೈಜ ಸವಲತ್ತುಗಳನ್ನು ನೀಡುವಂತೆ ದ.ಕ. ಸಂಸದರು ಹಾಗೂ ಜಿಲ್ಲಾಧಿಕಾರಿಯವರ ಸೂಚನೆ ನೀಡಿದ್ದರೂ ಎಂಆರ್‌ಪಿಎಲ್‌ ಕವಡೆಕಾಸಿನ ಕಿಮ್ಮತ್ತನ್ನೂ ನೂಡುತ್ತಿಲ್ಲ ಎಂದು ಎಂಆರ್‌ಪಿಎಲ್‌ ಗುತ್ತಿಗೆ ನೌಕರರು ದೂರಿದ್ದಾರೆ.

ಎಂಆರ್‌ ಪಿಎಲ್‌ನಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಕಾನೂನು ರೀತಿಯಲ್ಲಿ ದೊರೆಯಬೇಕಿದ್ದ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ನೌಕರರು ಹಲವು ಪ್ರತಿಭಟನೆಗಳನ್ನು ನಡೆಸಿದ್ದರು. ಸಂಸ್ಥೆ ನೌಕರರ ಪ್ರತಿಭಟನೆಗೆ ಜಗ್ಗದಿದ್ದಾಗ ಕೈಗಾರಿಕಾ ವಲಯದ ಜಿಲ್ಲಾಧಿಕಾರಿ ಹಾಗೂ ದ.ಕ ಸಂಸದ ಬೃಜೇಶ್‌ ಚೌಟ ಅವರಿಗೆ ಹಲವು ಬಾರಿ ದೂರುಗಳನ್ನೂ ನೀಡಿದ್ದರು. ಇದರ ಪರಿಣಾಮವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕರ್ಮಚಾರಿ ಸಂಘದ ಜೊತೆ ಮಹತ್ವದ ಸಭೆ ನಡೆದಿತ್ತು.

ಈ ಸಭೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ವಿಮಾ ಸೌಲಭ್ಯ, ಆರೋಗ್ಯ ಭದ್ರತೆ, ವಿಶೇಷ ಭತ್ತೆ ಮುಂತಾದ ಪ್ರಮುಖ ಕಾರ್ಮಿಕರ ಬೇಡಿಕೆಗಳಿಗೆ ಮೂರು ದಿನಗಳ ಒಳಗೆ ಸಂಸ್ಥೆ ಲಿಖಿತವಾಗಿ ಉತ್ತರ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಂಸದರು ಸೂಚಿಸಿದ್ದರು. ಆದರೂ ಸಂಸ್ಥೆ ಸಂಸದರ ಸೂಚನೆಗೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದೆ, ಕಾರ್ಮಿಕರನ್ನು ಸತಾಯಿಸು ತ್ತಿದೆ ಎಂದು ಕಾರ್ಮಿಕರು ದೂರಿದ್ದಾರೆ.

ಈ ಹಿಲ್ಲೆಯಲ್ಲಿ ಗುರುವಾರ ಗುತ್ತಿಗೆ ನೌಕರರು ಸುರತ್ಕಲ್‌ ಮಂಗಳ ಪೇಟೆಯ ಶಾರದ ಭಜನಾ ಮಂಡಳಿಯಲ್ಲಿ ಕಾರ್ಮಿಕರ ಬೃಹತ್ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಪ್ರಮಾಣ ಮಾಡಬೇಕು ಎಂದು ಕಾರ್ಮಿಕರು ದೈವಗಳ ಮೊರೆಹೋಗಿದ್ದಾರೆ. ಶನಿವಾರ ಬೆಳಗ್ಗೆ 6:30 ರಿಂದ ಮುಖ್ಯ ಗೇಟ್ ನ ಮಹಾಗಣಪತಿ ದೇವಸ್ಥಾನದಿಂದ ಎಲ್ಲಾ ಕಾರ್ಮಿಕರು ಮತ್ತು ಕುಟುಂಬಿಕರು ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ಕಾರಣಿಕ ಕ್ಷೇತ್ರ ಪೆರ್ಮುದೆ ಕಾಯರ್ ಕೋಡಿಯ ಪಿಲಿಚಾಮುಂಡಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಲಿದ್ದಾರೆ.

ಎಂಆರ್ಪಿಎಲ್‌ ಸಂಸ್ಥೆಯು ಜನರು, ಅಧಿಕಾರಿಗಳನ್ನು ಯಾವುದೇ ಆಮಿಷಗಳನ್ನು ಒಡ್ಡಿ ತನ್ನೆಡೆಗೆ ಮಾಡಿ ಕೊಳ್ಳಬಹುದು ಆದರೆ, ದೇವರು ದೈವಗಳನ್ನು ತನಗೆ ಬೇಕಾದಂತೆ ನಡೆಸಿಕೊಳ್ಳಲು. ಹಾಗಾಗಿ ಎಂಆರ್‌ಪಿಎಲ್‌ ಅಕಾರಿಗಳಿಗೆ ನಮ್ಮ ಸಂಕಸ್ಟಗಳನ್ನು ಮನವರಿಕೆ ಮಾಡಿಕೊಟ್ಟು, ಗುತ್ತಿಗೆ ನೌಕರರ ಸಂಕಷ್ಟಗಳನ್ನು ಪರಿಹಾರ ಮಾಡಿಕೊಡುವಂತೆ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ಕಾರಣಿಕ ಕ್ಷೇತ್ರ ಪೆರ್ಮುದೆ ಕಾಯರ್ ಕೋಡಿಯ ಪಿಲಿಚಾಮುಂಡಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ನೌಕರರು ಮಾಹಿತಿ ನೀಡಿದ್ದಾರೆ.

ಎಂಆರ್‌ ಪಿಎಲ್‌ ಗುತ್ತಿಗೆ ನೌಕರರಿಗೆ ಯಾವುದೇ ಇಪಿಎಫ್‌ಐ, ಉಚಿತ ಆರೋಗ್ಯ ಸೇವೆಗಳನ್ನು ನೀಡು ತ್ತಿಲ್ಲ. ಈ ಬಗ್ಗೆ ಕಂಪೆನಿಯಲ್ಲಿ ಕೇಳಿದರೆ ನೀಡುವುದಿಲ್ಲ ಎಂದು ಕಡಾಕಂಡಿತವಾಗಿ ಹೇಳುತ್ತಿದ್ದಾರೆ. ಎಂ ಆರ್‌ ಪಿಎಲ್‌ ತನ್ನ ಏಳಿಗೆಗಾಗಿ ದುಡಿಯುತ್ತಿರುವ ನೌಕರರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಸಮಾಜ ಸೇವೆಯಲ್ಲಿ ನಿರತವಾಗಿದೆ. ಇಂತಹಾ ಸಮಾಜ ಸೇವೆ ಮಾಡಿ ಏನು ಪ್ರಯೋಜನ? ‌

- ಪ್ರಶಾಂತ್‌ ಮೂಡಾಯಿ ಕೋಡಿ, ಗುತ್ತಿಗೆ ನೌಕರರ ಮುಖಂಡರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News