ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ: ಆರೋಪ

ಅನ್ವರ್ ಮಾಣಿಪ್ಪಾಡಿ
ಮಂಗಳೂರು, ಎ.4: ವಕ್ಪ್ ಆಸ್ತಿ ಅಕ್ರಮ ಬಗ್ಗೆ ಈ ಹಿಂದೆ ವರದಿ ನೀಡಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ ಬಂದಿರುವ ಆರೋಪಗಳು ಕೇಳಿ ಬಂದಿವೆ.
ವಕ್ಫ್ ತಿದ್ದುಪಡಿ ಮಸೂದೆಯು ಸಂಸತ್‌ನಲ್ಲಿ ಅಂಗೀಕಾರವಾದೊಡನೆ ಪರ-ವಿರೋಧ ಚರ್ಚೆಗಳು ನಡೆಯು ತ್ತಿವೆ. ಈ ಮಸೂದೆ ತಿದ್ದುಪಡಿಗೆ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಕೊಟ್ಟ ಅಂಶಗಳೇ ಕಾರಣ ಎಂದು ಹೇಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಅನ್ವರ್ ಮಾಣಿಪ್ಪಾಡಿಗೆ ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಕರೆ ಬಂದಿವೆ ಎನ್ನಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಬೆದರಿಕೆ ಕರೆ ಬಂದಿರುವ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಆದರೆ ಈವರೆಗೆ ಲಿಖಿತ ದೂರು ಅಥವಾ ಯಾವುದೇ ದಾಖಲೆ ನೀಡಿಲ್ಲ. ಲಿಖಿತ ದೂರು ಹಾಗೂ ಅದಕ್ಕೆ ಪೂರಕ ದಾಖಲೆ ನೀಡಿದರೆ ಪ್ರಕರಣ ದಾಖಲಿಸಿ ತನಿಖೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.