ಎ.14: ʼತಾಯಿ ಬೇರುʼ ಪುಸ್ತಕ ಬಿಡುಗಡೆ
Update: 2025-04-12 21:49 IST

ಮಂಗಳೂರು, ಎ.12: ಬಹು ಓದು ಬಳಗ ಮಂಗಳೂರು ಪ್ರಕಟಿಸಿರುವ ಱತಾಯಿ ಬೇರು (ಮಕ್ಕಳ ಏಳಿಗೆಗಾಗಿ ಜೀವ ತೇದವರ ಕಥನಗಳು) ಪುಸ್ತಕವು ಎ.14ರಂದು ಬೆಳಗ್ಗೆ 10ಕ್ಕೆ ನಗರದ ಸಹೋದಯ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಆಕೃತಿ ಆಶಯ ಪಬ್ಲಿಕೇಶನ್‌ನ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಡಾ. ಜ್ಯೋತಿ ಚೇಳ್ಯಾರು ವಹಿಸಲಿದ್ದಾರೆ. ಸಮಾಜಶಾಸ್ತ್ರಜ್ಞೆ ಡಾ. ಲಕ್ಷ್ಮಿಪತಿ ಸಿ.ಜೆ., ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಉಪನ್ಯಾಸಕಿ ಡಾ. ಸುಧಾರಾಣಿ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಸಮಾಜ ಸೇವಕಿ ಮಲ್ಪೆ ಶಾರದಕ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕ ಕಲ್ಲೂರು ನಾಗೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಕೃತಿಯ ಸಂಪಾದಕರಾದ ಡಾ. ಪ್ರಕಾಶ್ ಪಿಂಟೋ ಮತ್ತು ಡಾ. ಶ್ರೀನಿವಾಸ ಹೊಡೆಯಾಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.