ಎ.16: ಮಂಗಳೂರು ನಗರದಲ್ಲಿ ವಿದ್ಯುತ್ ನಿಲುಗಡೆ

ಮಂಗಳೂರು,ಎ.12:ನಗರದ ಬಿಜೈ ಉಪಕೇಂದ್ರದಿಂದ ಹೊರಡುವ ಬಿಜೈ, ವಿವೇಕನಗರ ಮತ್ತು ಭಾರತೀ ನಗರ ಫೀಡರ್‌ಗಳ ವ್ಯಾಪ್ತಿಯಲ್ಲಿ ಎ.16ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.
ಹಾಗಾಗಿ ಬಿಜೈ ಕೆಎಸ್‌ಆರ್‌ಟಿಸಿ ಎದುರು, ಬಿಜೈ ಮೈನ್ ರಸ್ತೆ, ಬಿಜೈ ಚರ್ಚ್ ರಸ್ತೆ, ಬಿಜೈ ನ್ಯೂ ರೋಡ್, ಎಂಸಿಎಫ್ ಕಾಲನಿ, ಆನೆಗುಂಡಿ, ಸಂಕೈಗುಡ್ಡ, ಸಂಕೈಗುಡ್ಡ ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ, ಬಟ್ಟಗುಡ್ಡ, ಬಿಜೈ ಮ್ಯೂಸಿಯಂ ರಸ್ತೆ, ವಿವೇಕನಗರ, ಶ್ರೀದೇವಿ ಕಾಲೇಜು ರಸ್ತೆ, ಸಿಟಿ ಕಾಮತ್ ರಸ್ತೆ, ಜೈಲ್ ರಸ್ತೆ, ಎಂ.ಜಿ ರಸ್ತೆ, ಲಾಲ್‌ಭಾಗ್ ರಸ್ತೆ, ಬಳ್ಳಾಲ್‌ಭಾಗ್, ಮಾನಸ ಟವರ್, ಭಾರತಿನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್‌ಬೈಲ್, ಕೊಡಿಯಾಲ್‌ಬೈಲ್ ಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಎ.16: ಶೇಡಿಗುರಿ; ವಿದ್ಯುತ್ ನಿಲುಗಡೆ
ಮಂಗಳೂರು ನಗರದ ಉರ್ವ ಮಾರ್ಕೆಟ್ ಉಪಕೇಂದ್ರದಿಂದ ಹೊರಡುವ ಶೇಡಿಗುರಿ ಮತ್ತು ಉರ್ವ ಸ್ಟೋರ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಎ.16ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.
ಹಾಗಾಗಿ ದ್ವಾರಕನಗರ, ಅಬ್ಬಕ್ಕನಗರ, ಕಲ್ಬಾವಿ, ಸಾಗರ್ ಕೋರ್ಟ್ ರೋಡ್, ದಂಬೆಲ್, ಫಲ್ಗುಣಿ ನಗರ, ಯೆನಪೋಯ ಸ್ವಾಮಿಲ್ ರೋಡ್, ದಂಬೆಲ್ ರಿವರ್ ಸೈಟ್, ಅಶೋಕನಗರ ಯುವಕ ಸಂಘ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಶಕ್ತಿನಗರ; ವಿದ್ಯುತ್ ನಿಲುಗಡೆ
ಮಂಗಳೂರು ನಗರದ ಕುಲಶೇಖರ ಉಪಕೇಂದ್ರದಿಂದ ಹೊರಡುವ ಶಕ್ತಿನಗರ ಫೀಡರ್ ವ್ಯಾಪ್ತಿಯಲ್ಲಿ ಎ.16ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣೆ ಕಾಮಗಾರಿ ನಡೆಯಲಿದೆ.
ಹಾಗಾಗಿ ಕ್ಯಾಸ್ತಲಿನೋ ಕಾಲನಿ, ಕೊಂಗೂರು ಮಠ, ರಾಜೀವ ನಗರ, ಶಕ್ತಿನಗರ, ಪ್ರಶಾಂತ್ ರೋಡ್, ಕಾರ್ಮಿಕ ಕಾಲೊನಿ, ಪಂಜಿರೇಲ್, ಬೊಲ್ಯಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಬೆಳುವಾಯಿ, ಶಿರ್ತಾಡಿ; ವಿದ್ಯುತ್ ನಿಲುಗಡೆ
ಮಂಗಳೂರು: ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ ಬೆಳುವಾಯಿ,ಅಳಿಯೂರು,ಶಿರ್ತಾಡಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಎ.16ರಂದು ಬೆಳಗ್ಗೆ 9:30ರಿಂದ ಸಂಜೆ 6ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.
ಹಾಗಾಗಿ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್‌ಕಟ್ಟೆ, ಆಜಾದ್ ನಗರ,ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.