ಡಾ.ಕೆ.ಚಿನ್ನಪ್ಪ ಗೌಡರಿಗೆ ಡಾ. ಜೀ.ಶಂ.ಪ ತಜ್ಞ ಪ್ರಶಸ್ತಿ ಪ್ರದಾನ
Update: 2025-04-04 23:09 IST

ಕೊಣಾಜೆ: ಕರ್ನಾಟಕ ಜಾನಪದ ಅಕಾಡೆಮಿಯು ಡಾ.ಕೆ. ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿ ರುವ ಸಾಧನೆಯನ್ನು ಗುರುತಿಸಿ 2023ನೇ ಸಾಲಿನ ಡಾ. ಜೀ.ಶಂ.ಪ ತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಇತ್ತೀಚೆಗೆ ಬೀದರ್ ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿನ್ನಪ್ಪ ಗೌಡರಿಗೆ ಭಾಗವಹಿಸಲು ಅಸಾಧ್ಯವಾಗಿದ್ದ ಕಾರಣ ಅವರನ್ನು ಬೆಂಗಳೂರಿನ ಅಕಾಡೆಮಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭ ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಡಾ.ಗೌಡರು ಜನಪದ ಧಾರ್ಮಿಕ ರಂಗಭೂಮಿ, ಸಿರಿ ಮಹಾಕಾವ್ಯ ಮತ್ತು ಪಾಡ್ದನಗಳ ಅಧ್ಯಯನದ ಮೂಲಕ ಮಾಡಿ ರುವ ಸಾಧನೆಗಳನ್ನು ವಿವರಿಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್ ಎನ್. ನಮ್ರತ, ಅಕಾಡೆಮಿಯ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಭಾಗವಹಿಸಿದ್ದರು.