ಮಂಗಳೂರು: ಸಂಶಯಾಸ್ಪದ ಯುವಕನ ಸೆರೆ
Update: 2025-04-04 21:20 IST

ಮಂಗಳೂರು: ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅನುಮಾನಾಸ್ಪದ ವಾಗಿ ನಿಂತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ಬಂಗಾರ ಪೇಟೆ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರದ ನಿವಾಸಿ ಹರ್ಷಿತ್ (26) ಬಂಧಿತ ಆರೋಪಿ.
ಬರ್ಕೆ ಠಾಣೆಯ ಪೊಲೀಸರು ಮಾ.3ರಂದು ಗಸ್ತು ನಿರತನಾಗಿದ್ದ ವೇಳೆ ಅಂದರೆ ಮುಂಜಾವ 4:30ಕ್ಕೆ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲೆಯಲ್ಲಿ ನಿಂತಿದ್ದ. ಪೊಲೀಸರನ್ನು ಕಂಡೊಡನೆ ಹರ್ಷಿತ್ ಓಡಿ ಹೋಗಲು ಯತ್ನಿಸಿದ್ದಾನೆ. ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದೆ ಸಂಶಯಾಸ್ಪದ ರೀತಿ ಯಲ್ಲಿ ವರ್ತಿಸಿದ ಕಾರಣ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.