ಕುದ್ರೋಳಿಯ ಸಲಫಿ ಮಸೀದಿಯಲ್ಲಿ ಈದುಲ್ ಫಿತ್‌ರ್ ಆಚರಣೆ
Update: 2025-04-01 12:59 IST

ಮಂಗಳೂರು: ಕುದ್ರೋಳಿಯ ಸಲಫಿ ಮಸೀದಿಯ ಈದ್ಗಾಹ್ ಮೈದಾನದಲ್ಲಿ ಶೇಕ್ ಸಾಕಿಬ್ ಸಲೀಂ ಉಮ್ರಿ ಈದ್ ನಮಾಝ್ ಗೆ ನೇತೃತ್ವ ನೀಡಿದರು.
ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್ ಅಲ್ ಫಿತ್ರ್ ಕೂಡ ಒಂದಾಗಿದೆ. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ, ಕುಟುಂಬ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಮತ್ತು ಫೆಲಸ್ತೀನ್ ನ ಅಮಾಯಕ ಜನರಿಗೆ ಪ್ರಾರ್ಥಿಸುವ ಮೂಲಕ ಈ ಹಬ್ಬವನ್ನು ಆಚರಿಸಿರಿ ಎಂದು ಸಂದೇಶ ನೀಡಿದರು.