ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ಪಿಯು ಕಾಲೇಜಿಗೆ 100 ಶೇಕಡ ಫಲಿತಾಂಶ
Update: 2025-04-08 22:57 IST

ಮಂಗಳೂರು, ಎ.8: ಅಡ್ಕಾರೆಪಡ್ಪು ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ಮಹಿಳಾ ಪದವಿ ಪೂರ್ವ ಕಾಲೇಜು 2024-25 ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಶೇ 100ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಖತೀಜ ಸಿಮ್ರಾ 573( ಶೇ 95.50), ಹಾಗೂ ಫಾತಿಮಾ ಮುಷ್ಫಿಕ 569( ಶೇ 94.83) ಅಂಕಗಳನ್ನು ಗಳಿಸಿ ಕಾಲೇಜಿಗೆ ಅಗ್ರಸ್ಥಾನಿ ಆಗಿದ್ದಾರೆ. ಗ್ರೀನ್ ವೀವ್ ಕಾಲೇಜು ಕಳೆದ 10 ವರ್ಷಗಳಿಂದ ಶೇಕಡಾ 100 ಫಲಿತಾಂಶ ದಾಖಲಿಸಿದೆ.