ಡಿವೈಡರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ವಿದ್ಯಾರ್ಥಿಗಳಿಬ್ಬರ ಮೃತ್ಯು

ಮಂಗಳೂರು, ಎ.8: ನಗರದ ಕುಂಟಿಕಾನ-ಕೆಪಿಟಿ ಮಧ್ಯೆ ದ್ವಿಚಕ್ರ ವಾಹನವೊಂದು ಸವಾರನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮವಾಗಿ ವಾಹನದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿರುವುದು ವರದಿಯಾಗಿದೆ.
ಕೇರಳ ಕೈಪಕುಲ್ಲತ್ತಿಲ್ ಪಲ್ಲೊತ್ತ್ ನಿವಾಸಿ ಧನುರ್ವೇದ್ ಸಿ (19), ಕೇರಳ ನಿವಾಸಿ ಸಂಕೀರ್ತ್ (25) ಮೃತಪಟ್ಟವರು. ತಿರುವನಂತಪುರ ಪತ್ತಮಕ್ಕಲು ನಿವಾಸಿ ಸಿಬಿ ಸ್ಯಾಮ್ (25) ಅವರಿಗೆ ಗಾಯವಾಗಿದೆ. ಧರ್ನುವೇದ್ ನಗರದ ಕಾಲೇಜೊಂದರಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಓದುತ್ತಿದ್ದರೆ, ಸಂಕೀರ್ತ್ ಮತ್ತು ಶ್ಯಾಮ್ ಡೆಂಟಲ್ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು.
ಪ್ರಕರಣ ವಿವರ: ಮೂವರು ವಿದ್ಯಾರ್ಥಿಗಳು ಕುಂಟಿಕಾನ ಬಳಿಯ ರೂಮೊಂದರಲ್ಲಿ ವಾಸ್ತವ್ಯವಿದ್ದರು. ಎ.8ರಂದು ಬೆಳಗ್ಗಿನ ಜಾವ ಸಂಕೀರ್ತ್, ಧನುರ್ವೇದ್, ಸಿಬಿ ಶ್ಯಾಮ್ ಚಹಾ ಕುಡಿಯಲು ಕುಂಟಿಕಾನ ಲೋಹಿತ್ ನಗರದಿಂದ ಪಂಪುವೆಲ್ ಕಡೆಗೆ ಹೋಗಲು ನಿರ್ಧರಿದರು ಎನ್ನಲಾಗಿದೆ. ಸಂಕೀರ್ತ್, ಧನುರ್ವೇದ್ ಹಾಗೂ ಸಿಬಿ ಶ್ಯಾಮ್ ಒಂದೇ ದಿಚಕ್ರ ವಾಹನದಲ್ಲಿ ಕುಳಿತುಕೊಂಡು ತೆರಳಿದ್ದು , ಸಂಕೀರ್ತ್ ಬೈಕ್ ಸವಾರಿ ಮಾಡುತ್ತಿದ್ದರೆ, ಧನುರ್ವೇದ್ ಮಧ್ಯದಲ್ಲಿ, ಶ್ಯಾಮ್ 3ನೇ ವ್ಯಕ್ತಿಯಾಗಿ ಕುಳಿತ್ತಿದ್ದರು. ಕುಂಟಿನಕಾನ-ಕೆಪಿಟಿ ರಸ್ತೆಯಲ್ಲಿ ದಿಚಕ್ರ ವಾಹನ ಸಾಗುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿ ವಾಹನ ಎಸ್‌ಕೆಎಸ್ ಓಪನ್ ಡಿವೈಡರ್‌ಗೆ ಢಿ ಕ್ಕಿಯಾದ ಪರಿಣಾಮ ಮೂವರು ವಾಹನ ಸಮೇತ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಸಂಕೀರ್ತ್, ಧನುವೇಧ್‌ಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ.ಸಿಬಿ ಸ್ಯಾಮ್ ರವರಿಗೆ ತರಚಿದ ಗಾಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.