ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಾಲಿಹ
Update: 2025-03-30 20:33 IST

ಮಂಗಳೂರು : ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ನಡೆಸಿದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಜೆ.ಎಂ ಸಾಗರ ರೇಂಜ್ ಮಟ್ಟದಲ್ಲಿ ನಗರ ಸಿರಾಜುಲ್ ಹುದಾ ಅರೇಬಿಕ್ ಮದ್ರಸದ ವಿದ್ಯಾರ್ಥಿನಿ ಸ್ವಾಲಿಹ 557 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ನೂಲಿಗ್ಗೇರಿ ಮುಹಮ್ಮದ್ ರಫಿ ಮತ್ತು ರೇಷ್ಮಾ ಭಾನು ದಂಪತಿಯ ಪುತ್ರಿಯಾಗಿದ್ದಾರೆ.
ಇವರ ಉಜ್ವಲ ಭವಿಷ್ಯಕ್ಕೆ ಆಡಳಿತ ಮದರಸ ಮಂಡಳಿ ಶುಭಕೋರಿದೆ.