ಚಂದ್ರದರ್ಶನದ ಮಾಹಿತಿ ನೀಡಲು ಮಾಣಿ ಉಸ್ತಾದ್ ಮನವಿ
Update: 2025-03-30 12:18 IST

ಮಂಗಳೂರು : ಇಂದು ಆದಿತ್ಯವಾರ ಸೂರ್ಯಾಸ್ತದ ಬಳಿಕ ಶವ್ವಾಳ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ. ಹಾಗಾಗಿ ಚಂದ್ರದರ್ಶನವಾದರೆ ಮುಸ್ಲಿಮರು ಉಡುಪಿ , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರ ಗಮನಕ್ಕೆ ತರುವಂತೆ (ಸಂಪರ್ಕ ಸಂಖ್ಯೆ: 94483 00193/9964428601/9844989833 /92427 71786) ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಮ್.ಎ.ಬಾವು ಮೂಳೂರು ತಿಳಿಸಿದ್ದಾರೆ.