ಮಂಗಳೂರು ಪೊಲೀಸರ ವಾರ್ಷಿಕ ಕ್ರೀಡಾಕೂಟ ಆರಂಭ

Update: 2023-11-27 08:18 GMT

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಎರಡು ದಿನಗಳ ವಾರ್ಷಿಕ ಪೊಲೀಸ್ ಕ್ರೀಡಾಕೂಟ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆರಂಭಗೊಂಡಿತು. ಅಂತರ್‌ರಾಷ್ಟ್ರೀಯ ಕ್ರೀಡಾಪಟು ಎಂ.ಆರ್.ಪೂವಮ್ಮ ಅವರು ಬಲೂನು ಹಾಗೂ ಪಾರಿವಾಳವನ್ನು ಬಾನಿಗೆ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಹೆತ್ತವರು ಗಮನ ನೀಡಬೇಕಾಗಿದೆ. ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಉದ್ಯೋಗವನ್ನು ಸುಲಭವಾಗಿ ಪಡೆಯಲು ಸಾಧ್ಯ ಎಂದರು.

2021ನೇ ಸಾಲಿನಲ್ಲಿ ವೈಯಕ್ತಿಕ ಚಾಂಪಿಯನ್ ಆಗಿರುವ ಸಿಎಆರ್‌ನ ಎಎಚ್‌ಸಿ ಮುತ್ತು ಪವಾರ್ ಕ್ರೀಡಾಜ್ಯೋತಿಯೊಂದಿಗೆ ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದರು.

ಮಂಗಳೂರು ಸಿಎಆರ್‌ನ ಆರ್‌ಎಸ್‌ಐ ಸಂತೋಷ್ ನೇತೃತ್ವದಲ್ಲಿ ಕ್ರೀಡಾಪಟುಗಳು ಕ್ರೀಡಾ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಉಪ ಪೊಲೀಸ್ ಆಯುಕ್ತರಾದ ಉಮೇಶ್ ಪಿ, ಸಹಾಯಕ ಆಯುಕ್ತರಾದ ಗೀತಾ ಕುಲಕರ್ಣಿ, ಪಿಎ ಹೆಗಡೆ, ಧನ್ಯಾ ನಾಯ್ಕ್, ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪಾಠಕ್, ಎಂಆರ್‌ಪಿಎಲ್‌ನ ಡೆಪ್ಯುಟಿ ಕಮಾಡೆಂಟ್ ವಿಕ್ರಂ, ನಿವೃತ್ತ ಡಿಸಿಪಿ ಡಾ. ಧರ್ಮಯ್ಯ, ನಿವೃತ್ತ ಎಸ್‌ಪಿ ಹರಿಶ್ಚಂದ್ರ,ನಿವೃತ್ತ ಕಮಾಡೆಂಟ್‌ಡಾ. ಶಿವಪ್ರಸಾದ್ ರೈ, ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಮತ್ತು ಜ್ಯೋತಿ ನಾಯಕ್ , ನಿವೃತ್ತ ಪೊಲೀಸ್ ಅಧಿಕಾರಿಗಳಾದ ವಿಶ್ವನಾಥ ಪಂಡಿತ್, ತಿಲಕಚಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿದರು. ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿಪಿ ವಂದಿಸಿದರು.

ಕ್ರೀಡಾಕೂಟದ ಸಮಾರೋಪ ಸಮಾರಂಭ ನ.28ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಜೇತರಿಗೆ ಬಹುಮಾನ ವಿತರಿಸಲಿರುವರು.

 

 

 







 


 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News