ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಗೆ ಅರ್ಜಿ ಆಹ್ವಾನ

Update: 2023-09-26 16:19 GMT

ಮಂಗಳೂರು,ಸೆ.26: ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯನ್ನು ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೂ ಅನ್ವಯಿಸುವಂತೆ ಸರಕಾರ ಜಾರಿಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳ ನಿರ್ವಾಹಕರು, ಕ್ಲೀನರ್‌ಗಳು ಈ ಯೋಜನೆಯಡಿ ನೋಂದಣಿ ಮಾಡಿಸಬಹುದು.

*ಯೋಜನೆಯ ಪ್ರಯೋಜನಗಳು: ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ 5 ಲಕ್ಷ ರೂ.ಗಳ ಪರಿಹಾರ, ಶಾಶ್ವತ ದುರ್ಬಲತೆಗೆ 2 ಲಕ್ಷ ರೂ.ಗಳ ವರೆಗೆ ಪರಿಹಾರ, ತಾತ್ಕಾಲಿಕ ದುರ್ಬಲತೆಗೆ 50,000ರೂ. ನಿಂದ, 1ಲಕ್ಷ ರೂ.ಗಳ ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ಮಾಡಲಾಗುವುದು.

ಶೈಕ್ಷಣಿಕಧನ ಸಹಾಯ: ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನು ಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಾಂಗದವರೆಗೆ ವಾರ್ಷಿಕ 10,000ರೂ.ಗಳ ಶೈಕ್ಷಣಿಕ ಧನಸಹಾಯ.

ಈ ಯೋಜನೆಯಡಿ ಖಾಸಗಿ ವಾಣಿಜ್ಯ ವಾಹನದ ನಿರ್ವಾಹಕರು ಮತ್ತು ಕ್ಲೀನರ್‌ಗಳು ನೋಂದಣಿಯಾಗಲು 20ರಿಂದ 70 ವಷರ್ದೊಳಗಿರಬೇಕು. ಸ್ಟಾಂಪ್ ಸೈಜ್ ಫೋಟೊ 1, ಪಾಸ್ ಪೋರ್ಟ್ ಸೈಜ್ 1, ಆಧಾರ್‌ಕಾರ್ಡ್, ಮಾರ್ಕ್ಸ್ ಕಾರ್ಡ್ (ಎಸ್‌ಎಸ್‌ಎಲ್‌ಸಿ)/ ಡಿ.ಎಲ್/ ಪಾನ್‌ಕಾರ್ಡ್, ಬ್ಯಾಂಕ್‌ಖಾತೆಯ ಪ್ರತಿ, ನಿರ್ವಾಹಕರ ಊರ್ಜಿತ ಪರವಾನಿಗೆ (ಸಾರಿಗೆ ಇಲಾಖೆಯಿಂದ ಪಡೆದಿರತಕ್ಕದ್ದು) (ನಿರ್ವಾಹಕರಿಗೆ ಮಾತ್ರ), ಸಂಸ್ಥೆ/ ಮಾಲಕರಿಂದ ನೀಡಲಾಗಿರುವ ಗುರುತಿನ ಚೀಟಿ(ಲಭ್ಯವಿದ್ದಲ್ಲಿ) ಈ ಎಲ್ಲಾದಾಖಲೆಯೊಂದಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ ಹಾಗೂ ಕಾರ್ಮಿಕ ನಿರೀಕ್ಷಕರುಗಳ ಕಚೇರಿ ದೂ.ಸಂಖ್ಯೆ:0824-2435343, 0824-2433132 ಅನ್ನು ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News