ಮಂಗಳೂರು-ಬೆಂಗಳೂರು: ಸ್ಲೀಪರ್ ಅಂಬಾರಿ ಉತ್ಸವ ಬಸ್‌ಗಳ ಚಾಲನೆ

Update: 2024-12-26 15:09 GMT

ಮಂಗಳೂರು,ಡಿ.26: ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗಕ್ಕೆ 4 ಹೊಸ ಎಸಿ ಸ್ಲೀಪರ್ ಅಂಬಾರಿ ಉತ್ಸವ ವಾಹನಗಳು ಸೇರ್ಪಡೆಗೊಂಡಿವೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕುಂದಾಪುರ-ಮಂಗಳೂರು-ಹಾಸನ ಬೆಂಗಳೂರು ಹಾಗೂ ಮಂಗಳೂರು-ಹಾಸನ- ಬೆಂಗಳೂರು ಮಾರ್ಗದಲ್ಲಿ ಹೊಸ ಎಸಿ ಸ್ಲೀಪರ್ ಅಂಬಾರಿ ಉತ್ಸವ ಬಸ್‌ಗಳು ಸಂಚರಿಸಲಿವೆ.

ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ 10:15ಕ್ಕೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ರಾತ್ರಿ 11:01ಕ್ಕೆ ಹೊರಡಲಿದೆ. ಕುಂದಾಪುರದಿಂದ ರಾತ್ರಿ 8:30ಕ್ಕೆ ಹಾಗೂ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಡಲಿದೆ. ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ:7760990720, ಮಂಗಳೂರು ಮುಂಗಡ ಬುಕಿಂಗ್ ಶಾಖೆ: 9663211553, ಕುಂದಾಪುರ ಬಸ್ ನಿಲ್ದಾಣ:9663266009ನ್ನು ಸಂಪರ್ಕಿಸುವಂತೆ ಮಂಗಳೂರು ವಿಭಾಗ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News