ಡಾ.ಬಿ.ಆರ್.ಅಂಬೆಡ್ಕರ್ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Update: 2023-11-04 13:55 GMT

ಮಂಗಳೂರು: ಡಾ.ಬಿ.ಆರ್.ಅಂಬೆಡ್ಕರ್ ಅಭಿವೃದ್ಧಿ ನಿಗಮದಡಿ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಿಗೆ ಸೇವಾ ಸಿಂಧು ವೆಬ್ ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

1. ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ. ಘಟಕ ವೆಚ್ಚ 1 ಲಕ್ಷ ರೂ. ಇದರಲ್ಲಿ ಸಹಾಯಧನ 50,000 ರೂ. ಹಾಗೂ ಸಾಲ 50,000 ರೂ. (ಶೇ.4 ಬಡ್ಡಿದರ)

2. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ :ವ್ಯಾಪಾರ ಮತ್ತಿತರ ಉದ್ಯಮಗಳಿಗೆ ಸಹಾಯಧನ ನೀಡಲಾಗುತ್ತದೆ. ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ 1ಲಕ್ಷ ರೂ., ಘಟಕ ವೆಚ್ಚದ ಶೇ.70ರಷ್ಟು ಸಹಾಯ ಧನ ಅಥವಾ ಗರಿಷ್ಟ 2 ಲಕ್ಷ ರೂ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.

3. ಸ್ವಾವಲಂಬಿ ಸಾರಥಿ: ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಘಟಕ ವೆಚ್ಚದ ಶೇ.75ರಷ್ಟು ಸಹಾಯಧನ ಅಥವಾ ಗರಿಷ್ಟ 4 ಲಕ್ಷ ರೂ.

4. ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ :ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ 2.50 ಲಕ್ಷ ರೂ.. ಇದರಲ್ಲಿ ಸಹಾಯಧನ 1.50 ಲಕ್ಷ ರೂ.ಹಾಗೂ ಸಾಲ 1 ಲಕ್ಷ ರೂ.(ಶೇ. 4ರಷ್ಟು ಬಡ್ಡಿದರ)

5. ಭೂ ಒಡೆತನ ಯೋಜನೆ :ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಘಟಕ ವೆಚ್ಚ 25ಲಕ್ಷ ರೂ. ಅದರಲ್ಲಿ 20 ಲಕ್ಷ ರೂ. ಸಹಾಯಧನ ಶೇ.50 ಹಾಗೂ ಸಾಲ ಶೇ.50 (ಶೇ.6 ಬಡ್ಡಿದರ) ಕೃಷಿ ಜಮೀನು ಖರೀದಿಸಿ ನೀಡಲಾಗುವುದು.

6. ಗಂಗಾ ಕಲ್ಯಾಣ ಯೋಜನೆ :1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿ ಕೊಡಲಾಗುವುದು. ಘಟಕ ವೆಚ್ಚ 4.75 ಲಕ್ಷ ರೂ. ಇದರಲ್ಲಿ 50 ಸಾವಿರ ರೂ. ಸಾಲವೂ ಸೇರಿರುತ್ತದೆ.

ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನ.29ರೊಳಗೆ ಅರ್ಜಿ ಸಲ್ಲಿಸಬಹುದು. ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ವೆಬ್‌ಸೈಟ್ ವಿಳಾಸ ಅರ್ಜಿ ಸಲ್ಲಿಸಬಹುದು. ನಿಗಮದ ನಿರ್ದೇಶಕ ಮಂಡಳಿ, ವಿವೇಚನಾ ಕೋಟಾ ಅಥವಾ ಸರಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಹೆಚ್ಚಿನ ಮಾಹಿತಿಗೆ ಡಾ.ಬಿ.ಆರ್.ಅಂಬೆಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮಗಳ ವೆಬ್‌ಸೈಟ್ ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್‌ಸಿ/ಎಸ್‌ಟಿ ಸಹಾಯವಾಣಿ 9482300400 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಜಿ.ಎಚ್.ಎಸ್ ರೋಡ್ ಮಂಗಳೂರು. ದೂ.ಸಂ: 0824-2951814 ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News