ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಪದ್ಧತಿ ಪೂರಕವಾಗಿದೆ: ಯು.ಟಿ.ಖಾದರ್
ಕೊಣಾಜೆ: ಆರೋಗ್ಯ ವಂತ ವ್ಯಕ್ತಿ ಆರೋಗ್ಯ ವಂತ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಪದ್ಧತಿ ಪೂರಕವಾಗಿದೆ ಎಂದು ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ತಿಳಿಸಿದ್ದಾರೆ.
ಶಾರದ ವೈದ್ಯಕೀಯ ಕಾಲೇಜು ಅಸ್ಪತ್ರೆ,ಜನ ಶಿಕ್ಷಣ ಟ್ರಸ್ಟ್, ಸ್ಮೈಲ್ ಟ್ರಸ್ಟ್ ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್, ಗ್ರಾ.ಪಂ.ಗಳ ಸಹಯೋಗದಲ್ಲಿ ಜರಗಿದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ರೋಗ ಮುಕ್ತ ಆರೋಗ್ಯ ವಂತ ಸಮಾಜ ನಿರ್ಮಾಣಕ್ಕೆ ಜನ ಶಿಕ್ಷಣ ಟ್ರಸ್ಟ್ ಸ್ವಚ್ಛತೆ ಯೊಂದಿಗೆ ಆಯುಷ್ ಆರೋಗ್ಯ ಅಭಿಯಾನ ಆರಂಭಿಸಿದ್ದು ಇದಕ್ಕೆ ಶಾರದ ಆಯುರ್ವೇದ ಕಾಲೇಜು ಆಸ್ಪತ್ರೆ, ಗ್ರಾಮ ಪಂಚಾಯತಿ ಗಳು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.
ಕಸ ಮುಕ್ತ ಸ್ವಚ್ಛ ಆಯುಷ್ ಗ್ರಾಮದ ಗುರಿ ಸಾಧನೆಗೆ ಮಾಸಿಕ ಆಯುರ್ವೇದ ಶಿಬಿರಗಳ ಯಶಸ್ವಿ ಮುನ್ನಡೆಗೆ ಸರ್ವರೂ ಸಹಕರಿಸುವಂತೆ ಮಾಜಿ ಒಂಬುಡ್ಸ್ ಮೇನ್ ಶೀನ ಶೆಟ್ಟಿ ಮನವಿ ಮಾಡಿದರು.
ಡಾ. ಗಣೇಶ್ ನಾಯಕ್ ಆಯುರ್ವೇದ ದಿನಾಚರಣೆ ಮಹತ್ವದ ಕುರಿತು ಮಾಹಿತಿ ನೀಡಿ ಡಾ. ಹರ್ಷ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ತಂಡದೊಂದಿಗೆ ಆರೋಗ್ಯ ತಪಾಸಣೆ ಉಚಿತ ಚಿಕಿತ್ಸೆ ನೀಡಿದರು. ಲ.ರಮೇಶ ಶೇಣವ ಸಿಮರೋಬ ಔಷಧೀಯ ಗಿಡವನ್ನು ಇರಾ ಗ್ರಾ.ಪಂ. ಸದಸ್ಯ ಯಾಕುಬ್ ಗೆ ವಿತರಿಸಿ ಮನೆ-ಮನೆ ಔಷಧ ವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಸ್ವಚ್ಚ ಸಂಕೀರ್ಣ ಮೂಲಕ ಒಣ ಕಸವನ್ನು ಹಣ ಕಸವನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ ಹರೇಕಳ ಗ್ರಾ.ಪಂ ಉಪಾಧ್ಯಾಕ್ಷ ಮಜೀದ್ ಗೆ ಕಸ ನಿರ್ವಾಹಕ ಇಸ್ಮಾಯಿಲ್ ಕಣಂತೂರು ಮೂರು ಸಾವಿರ ರೂಪಾಯಿಯನ್ನು ಹಸ್ತಾಂತರಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ, ಸಂಯೋಜಕಿ ಪದ್ಮ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು. ಮಾಜಿ ತಾ.ಪಂ ಸದಸ್ಯ ಹೈದರ ಕೈರಂಗಳ, ಪಂ ಸದಸ್ಯರಾದ ಅಬ್ದುಲ್ ರಹಿಮಾನ್ , ಯಾಕೂಬ್, ಸೆಮೀಮ,ಜೊಹರ, ಪ್ರೋ. ಹಿಲ್ಡಾ ರಾಯಪ್ಪನ್ ಉಪಸ್ಥಿತರಿದ್ದರು. ಜನ ಶಿಕ್ಷಣಟ್ರಸ್ಟ್ ನಿರ್ದೇಶಕರು ಕಾರ್ಯಕ್ರಮ ನಿರ್ವಹಿಸಿದರು.