ಬಜ್ಪೆ: ಆಧಾರ್ ತಿದ್ದುಪಡಿಗೆಂದು ಮನೆಯಿಂದ ತೆರಳಿದ್ದ ಮಹಿಳೆ ನಾಪತ್ತೆ

Update: 2024-07-19 05:42 GMT

ಬಜ್ಪೆ, ಜು.19: ಆಧಾರ್ ಕಾರ್ಡ್ ತಿದ್ದುಪಡಿಗೆಂದು ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜ್ಪೆ ಕಿನ್ನಿಕಂಬಳ ಮೂಡುಪೆರಾರ ನಿವಾಸಿ ಉಸ್ಮಾನ್ ಎಂಬವರ ಪತ್ನಿ ಫಾತಿಮಾ ಝೊಹರಾ(43) ನಾಪತ್ತೆಯಾದವರು.

ಫಾತಿಮಾ ಝೊಹರಾ ಕಳೆದ ಜೂನ್ 11ರಂದು ಆಧಾರ್ ಕಾರ್ಡ್ ಸರಿಪಡಿಸಿಕೊಂಡು ಬರುವುದಾಗಿ ಮಕ್ಕಳಲ್ಲಿ ಹೇಳಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತಿ ಉಸ್ಮಾನ್ ಬಜ್ಪೆ ಪೊಲೀಸರಿಗೆ ನೀಡಿರು ದೂರಿನಲ್ಲಿ ತಿಳಿಸಿದ್ದಾರೆ.

ಝೊಹರಾ ಐದು ಅಡಿ ಎತ್ತರ, ಗೋಧಿ ಮೈ ಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ, ಬ್ಯಾರಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News